ಸ್ವಾಮಿ ಅಯ್ಯಪ್ಪ ಸ್ವಾಮಿ /Swami ayyappa swami

ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ
ನೀನೆ ಗತಿಯಪ್ಪ , ನನಗೆ ನೀನೆ ಗತಿಯಪ್ಪ
||ಸ್ವಾಮಿ||

ಅಂಧಕಾರದಲ್ಲಿ ಅಲೆದಾಡುತಲಿರುವೆ
ಕಂಗಲಿದ್ದು ತಂದೆ ಏನು ಕಾಣದಿರುವೆ
||ಅಂಧಕಾರದಲ್ಲಿ||
ಏಕೆ ಇನ್ನು ದೇವ ಕರುಣೆ ತೋರದಿರುವೆ||2||
ಬೆಳಕಿನೆಡೆಗೆ ನನ್ನಾ ಬೇಗ ನಡೆಸು
ನನ್ನ ಪ್ರಭುವೆ||ಬೆಳಕಿನೆಡೆಗೆ||
||ಸ್ವಾಮಿ||

||ಸಿರಿಯು ಬೇಕು ಎಂದು ಕೇಳಲಾರೆನಯ್ಯ
ಸ್ವರ್ಗ ನೀಡು ಎಂದು ಬೇಡಲಾರೆನಯ್ಯ
||ಸಿರಿಯು||
ಮುಕ್ತಿಗಾಗಿ ತಂದೆ ಕೈಯ ಚಾಚೆನಯ್ಯ||2||
ಶಾಂತಿ ನೆಮ್ಮದಿಯನು ನೀಡಿ
ದೇವ ರಕ್ಷಿಸಯ್ಯ||ಶಾಂತಿ||
||ಸ್ವಾಮಿ||

ಕಂಗಳಲ್ಲಿ ನಿನ್ನಾ ಚರಣ ತುಂಬಿಕೊಳಲಿ
ಮನಸ್ಸಿನಲ್ಲಿ ನಿನ್ನ ಮೂರ್ತಿ ತುಂಬಿಕೊಳಲಿ
||ಕಂಗಳಲ್ಲಿ||
ಕಿವಿಗಳಲ್ಲಿ ನಿನ್ನಾ ಕೀರ್ತಿ ತುಂಬಿಕೊಳಲಿ||2||
ಉಸಿರು ಉಸಿರಿನಲ್ಲೂ ನಿನ್ನಾ
ನಾಮ ತುಂಬಿಕೊಳಲಿ||ಉಸಿರು||||
||ಸ್ವಾಮಿ||

Lyrics in English

Swami ayyappa swami ayyappa | nine gatiyappa nanage nine gatiyappa ||swami||

Andhakaaradalli aledaadutaliruve kangaliddu tande enu kanadiruve ||andhakaradalli|| eke ennu deva karune toradiruve||2|| belekinedege nannaa bega nadesu nanna prabhuve ||belekinedege||

Siriyu beku endu kelalaarenayya |swarga needu endu bedalaarenayya||siriyu|| muktigagi tande kaiya chaachenayya ||2|| shanti nemmadiyanu needi deva rakshisayya||shanti||

Kangalalli ninnaa charana tumbikolali |manasinalli ninna moorti tumbikolali||kangalalli||kivigalli ninnaa keerti tumbikolali||2||usiru usirinallu ninna nama tumbikolali||usiru||


Leave a Reply