ಹರಿ ನಿನ್ನೊಲುಮೆಯು ಆಗುವ ತನಕ / Hari ninnolumeyu aguva tanaka

ಹರಿ ನಿನ್ನೊಲುಮೆಯು ಆಗುವ ತನಕ
ಅರಿತು ಸುಮ್ಮನಿರುವುದು ಲೇಸು ||ಪ||

ಮರಳಿ ಮರಳಿ ತಾ ಪಡೆಯದ ಭಾಗ್ಯಕೆ
ಹೊರ ಹೊರಳುತ ಕನಲಲು ಬಂದೀತೆ ||ಅ.ಪ||

ದೂರು ಬರುವ ತೆರ ನಂಬಿಗೆ ಕೊಟ್ಟರೆ
ದುರ್ಜನ ಬರುವುದು ತಪ್ಪೀತೆ|
ದೂರದಿ ನಿಂತು ಮೊರೆಯಿಟ್ಟು ಕೂಗಲು
ಚೋರಗೆ ದಯವು ಪುಟ್ಟೀತೆ|
ಬಾರಿ ಬಾರಿಗೆ ಪಾತಿವ್ರತ್ಯವ ಬೋಧಿಸೆ
ಜಾರೆಗದರ ನಿಜ ಸೊಗಸೀತೆ|
ಊರು ಬಿಟ್ಟು ಬೇರೂರಿಗೆ ಹೋದರೆ
ಪ್ರಾರಬ್ಧವು ಬೇರಾದೀತೆ||

ಪಟ್ಟೆಮಂಚ ತಿರುವಿಟ್ಟರೆ ಫಣೆಯೊಳು
ಮೆಟ್ಟಿದ ಭ್ರಮಣೆಯು ಬಿಟ್ಟೀತೆ|
ಹೊಟ್ಟೆಲಿ ಸುತರಿಲ್ಲೆಂದೊದರಲು
ಹುಟ್ಟು ಬಂಜೆಗೆ ಫಲವಾದೀತೆ|
ಬೆಟ್ಟದ ನಲಿವಿಗೆ ಕಣ್ಣೀರು ಬಂಧರೆ
ಬೇಟೆಗಾರಗೆ ದಯ ಪುಟ್ಟೀತೆ ಕೆಟ್ಟ|
ಹಾವು ಕಚ್ಚಿದ ಗಾಯಕೆ ಹಳೆ
ಬಟ್ಟೆಯೊಳೊರಸೆ ವಿಷ ಹೋದೀತೆ||

ಧನಿಕರ ಕಂಡು ದೈನ್ಯವ ಪಟ್ಟರೆ
ದಾರಿದ್ರಿಯವು ಹಿಂಗೀತೆ|
ದಿನದಿನ ನೊಸಲೊಳು ತಿರುಮಣಿಯಿಟ್ಟರೆ
ದೇವರ ದಯವು ಪುಟ್ಟೀತೆ|
ಎಣಿಸಿಕೊಂಡೇಳ್ಹಂಜಿಯ ನೂತರೆ
ಮಣಿಯದ ಸಾಲವು ತೀರೀತೆ|
ಅನುದಿನ ನಮ್ಮ ಪುರಂದರ ವಿಠಲ
ನೆನೆದಲ್ಲದೆ ಭವ ಹಿಂಗೀತೆ ||

Lyrics in English

Hari ninnolumeyu aguva Tanaka
aritu summaniruvude lesu ||pa||

Marali marali taa padeyada bhagyake
hora horaluta kanalalu bandite ||a.pa||

Dooru baruva tera nambige kottare
durjana baruvudu tappite |
dooradi nintu moreyittu koogalu
chorage dayavu puttite |
bari narige pativrutyada bhodhise
jaregadara ninja sogasite |
ooru bittu beroorige hodare
prarabdhavu beradite ||

Patte mancha tiruvittare phaniyolu
meṭṭila bhramanavu bittite |
hotteli sutarillendodaralu
huttu banjege phalavadite |
bettada navilige kanniru bandare
betegarage daya puttite kettite Ketta |
havu kacchida gayakke hale
batteyolorase visha hodite ||

Dhanikaru kandu dainyava pattare
daridrayavu hingeete |
dinadina nosalolu tirumaniyittare
devara dayavu puttite |
enisikonelahnjiya nootare
maniyada salavu teerite |
anudina namma purandara vittalana
nenedallade bhava hingeete ||


Leave a Reply