ಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು / Hyange kottanu henna sagaranu

ಹ್ಯಾಂಗೆ ಕೊಟ್ಟನು ಹೆಣ್ಣ ಸಾಗರನು ಈ ವರಗೆ || ಪ ||

ಶೃಂಗಾರ ಪುರುಷ ಬಹು ಮಂದಿಯಿರಲು || ಅ.ಪ. ||

ಗುಷ್ಟುನಾರುವ ಮೈಯ್ಯಿ ಬಿಟ್ಟಿದ್ದ ಬಿರುಗಣ್ಣು
ಮುಟ್ಟಿ ನೋಡಿದರೆ ಮೈಯತಿ ಕಠಿಣವು
ಸೊಟ್ಟ ಮೋರೆಯು ಇವಗೆ ಎಷ್ಟುದ್ದ ಹಲ್ಲುಗಳು
ಇಷ್ಟು ಘೋರ ಮುಖದಳಿಯನೆಲ್ಲ್ಲಿ ದೊರಕಿದನೊ || 1 ||

ಬಡವನು ಭಿಕ್ಷುಕನು ಬಡಬನಂದದಿ ಕೋಪವು
ನೋಡಿದರೆ ತಲೆ ಜಟಿಯು ಕಟ್ಟಿಹುದು
ಬೆಡಗು ನುಡಿಗಾರ ಜಾರ ಚೋರನಿಗೆ
ನೋಡಿ ನೋಡಿ ಹೆಣ್ಣ ಹ್ಯಾಂಗೆ ಕೊಟ್ಟನು || 2 ||

ಭಂಡನಾಗಿರುವನು ಕಂಡವರೊಡನೆ ಕಾಳಗವ
ಕೊಂಡುಬಹ ಬಲು ಉದ್ದಂಡನಿವನು
ಅಂಡಜವಾಹನಗೆ ಯೋಗ್ಯವಾದ ಹೆಣ್ಣ
ಕಂಡುಕಂಡೀ ಹಯವದನಗೆ ಕೊಟ್ಟನ್ಹ್ಯಾಗೆ || 3 ||

Lyrics in English

Hyaange kottanu henna sagaranu ee varege ||pa||

Shrungara purusha bahu mandiyiralu || a.pa. ||

Gushtunaruva maiyyi bittidda birugannu
mutti nodidare maiyati katinavu
sotta moreyu ivage eshtudda hallugalu
ishtu ghora mukhadaliyanelli dorakidano ||1||

Badavanu bhikshukanu badabanandadi kopavu
nodidare tale jatiyu kattihudu
bedagu nudigara Jara choranige
nodi nodi henna hyaange kottanu || 2 ||

Bhandanagiruvanu kandavarodane kalagava
kondu baha balu uddandanivanu
andajavahanage yogyavada henna
kandukadi hayavadanage kottanhyange || 3 ||

Leave a Reply