ನಿನ್ನ ಮಗನೇನೇ ಗೋಪಿ /Ninna maganene gopi

ನಿನ್ನ ಮಗನೇನೇ ಗೋಪಿ-ಗೋಪಮ್ಮ |ನಿನ್ನ ಮಗನೇನೆ ಗೋಪಿ || ಪ||

ಚೆನ್ನಾರ ಚೆಲುವ ಉಡುಪಿಯ ಕೃಷ್ಣ ಬಾಲ |ನಿನ್ನ ಮಗನೇನೆ ಗೋಪ || ಅ.ಪ||

ಕಟವಾಯ ಬೆಣ್ಣೆ ಕಾಡಿಗೆಗಣ್ಣು ಕಟಿಸೂತ್ರ |ಪಟವಾಳಿ ಕೈಪ ಕೊರಳೊಳು ಪದಕ ||ಸಟೆಯಲ್ಲ ಬ್ರಹ್ಮಾಂಢ ಹೃದಯದೊಳಿರುತಿರಲು |ಮಿಟಿಮಿಟಿ ನೋಡುವ ಈ ಮುದ್ದು ಕೃಷ್ಣ ||1||

ಮುಂಗುರುಳ ಮುಂಜೆಡೆ ಬಂಗಾರದರಳೆಲೆ |ರಂಗಮಾಣಿಕದ ಉಂಗುರವಿಟ್ಟು ||ಪೊಂಗೆಜ್ಜೆ ಕಾಲಲಂದುಗೆ ಘಿಲ್ಲುಘಿಲ್ಲೆನುತ |ಅಂಗಳದೊಳಗಾಡುತಿಹ ಮುದ್ದು ಕೃಷ್ಣ ||2||

ಹರಿವ ಹಾವನೆ ಕಂಡು ಹೆಡೆಹಿಡಿದು ಆಡುವ |ಕರುವಾಗಿ ಆಕಳ ಮೊಲೆಯುಣ್ಣುವ ||ಅರಿಯದಾಟವ ಬಲ್ಲ ಅಂತರಂಗದ ಸ್ವಾಮಿ |ಧರೆಯೊಳಧಿಕನಾದ ಪುರಂದರವಿಠಲಯ್ಯ||3||

Lyrics in English

Ninna maganene gopi -gopamma | ninna maganene gopi ||pa||

Chennaara cheluva udupiya krishna baala | ninna maganene gopi ||a.pa.||

Katavaya benne kaadigegannu katisutra | patavali kaipa koralolu padaka | sateyalla bramhaanda hrudayadolirutiralu | mitimiti noduva e muddu krishna ||1||

Mungurula munjede bangaradaralele |rangamaanikada unguravittu|pongejje jalalanduge ghilghillenuta| angaladolagaadutiha muddu krishna ||2||

Hariva haavane kandu hede hididu haaduva | karuvagi aakala moleyunnuva |ariyadaatava balla antarangada swami | dhareyoladhikanaada purandara vittalayya ||


Leave a Reply