ನಿನ್ನ ನೋಡಿ ಧನ್ಯನಾದೆನೊ/Ninna nodi dhanyanaadeno

ನಿನ್ನ ನೋಡಿ ಧನ್ಯನಾದೆನೊ – ಹೇ ಶ್ರೀನಿವಾಸ ||ಪ||

ನಿನ್ನ ನೋಡಿ ಧನ್ಯನಾದೆ ಎನ್ನ ಮನದಿ ನಿಂತು ಸುಪ್ರ-ಸನ್ನ ದಯಮಾಡಿ ನೀನು ಮುನ್ನಿನಂತೆ ಸಲಹ ಬೇಕೋ ||ಅ.ಪ||

ಲಕ್ಷ್ಮಿರಮಣ ಪಕ್ಷಿವಾಹನ ಲಕ್ಷ್ಮಿ ನಿನ್ನ ವಕ್ಷದಲ್ಲಿ ರಕ್ಷಣ ಶಿಕ್ಷಣ ದಕ್ಷ ಪಾಂಡವ ಪಕ್ಷ ಕಮಲಾಕ್ಷ ರಕ್ಷಿಸು |1||

ದೇಶದೇಶಗಳನು ತಿರುಗಿ ಆಶಾಬದ್ಧನಾದೆ ಸ್ವಾಮಿದಾಸನೆನಿಸಿ ಎನ್ನ ಜಗದೀಶ ಕಾಯೋ ವಾಸುದೇವ ||2||

ಕಂತುಜನಕ ಕೊಟ್ಟು ಎನಗೆ ಅಂತರಂಗದ ಸೇವೆಯನ್ನುಅಂತರವಿಲ್ಲದೆ ಪಾಲಿಸಯ್ಯ ಹೊಂತಕಾರಿ ಪುರಂದರವಿಠಲ || 3||

Lyrics in English

Ninna nodi dhanyanaadeno – he srinivasa ||pa||

Ninna nodi dhanyanaade enna manadi nintu suprasanna dayamaadi neenu munninante salaha beko ||a.pa||

lakshmiramana pakshivaahana lakshmi ninna vakshadalli rakshana shikshana daksha paandava paksha kamalaaksha rakshisu ||1||

Deshadeshagalanu tirugi ashabaddanaade swamidaasanenisi enna jagadisha kaayo vasudeva ||2||

Kantujanaka kottu enage antarangada seveyannu antaravillade paalisayya hontakari purandaravittala ||3||


Leave a Reply