
ಇಲ್ಲೇ ವೈಕುಂಠ ಕಾಣಿರೊ – ಸಿರಿ |ಇಲ್ಲೇ ವೈಕುಂಠ ಕಾಣಿರೊ – ಸಿರಿ |ವಲ್ಲಭನಂಘ್ರಿಯ ನೆರೆನಂಬಿದವರಿಗೆ ||ಪ ||
ನುಡಿಯೆರಡಾಗದೆ ಕಡುಕೋಪ ಮಾಡದೆ |ಬಡತನ ಬಂದರು ಲೆಕ್ಕಿಸದೆ ||ಬೆಡಗು ಹೆಣ್ಣುಗಳ ಕಡೆಗಣ್ಣೊಳು ನೋಡದೆ |ಧೃಡಚಿತ್ತದಲಿ ಶ್ರೀ ಹರಿಯ ನಂಬಿದವರಿಗೆ ||1||
ಪಕ್ಷಪಾತವಿಲ್ಲದನ್ನದಾನಂಗಳನು – |ಪೇಕ್ಷೆಯ ಮಾಡದೆ ಗುರುಹಿರಿಯರನು |ಮೋಕ್ಷವ ಬಯಸುತ ಅನ್ಯಾಯವಳಿಯುತ |ಲಕ್ಷ್ಮೀನಾರಾಯಣನ ಬಿಡದೆ ಧೇನಿಪರಿಗೆ ||2||
ಪರಹಿತವನು ಮಾಡಿ ಕೆರೆಬಾವಿಗಳ |ಅರವಟಿಗೆಯ ಸಾಲಮರವ ಹಾಕಿ ||ಸಿರಿಪುರದರಸು ಶ್ರೀ ಪುರಂದರವಿಠಲನ |ಸ್ಥಿರಚಿತ್ತದಲಿ ಬಿಡದೆ ಸ್ಮರಿಸುತಲಿ ಹರಿಗೆ ||3||
Lyrics in English
Elle vaikunta kaaniro – siri |elle vaikunta kaaniro – siri | vallabhananghriya nerenambidavarige ||pa||
Nudiyeradaagade kadukopa maadade| badatana bandaru lekkisade || bedagu hennugala kadegannolu nodade| dhrudachittadali sri hariya nambidavarige ||1||
Pakshapaatavilladannadaanangalanu peksheya maadade guruhiriyaranu | mokshava bayasuta anyaayavaliyuta| lakshminaaraayanana bidade dheniparige||2||
Parahitavanu maadi kerebaavigala | aravatigeya saalamarava haaki || siripurandara vittalana stirachittadali bidade smarisutali harige||3||