ಏಳಯ್ಯ ಶ್ರೀಹರಿ ಬೆಳಗಾಯಿತು / Elayya shrihari belagayitu

ಏಳಯ್ಯ ಶ್ರೀಹರಿ ಬೆಳಗಾಯಿತು ||

ಏಳು ದೇವಕಿತನಯ ನಂದನಕಂದ ಏಳು ಗೋವರ್ಧನ ಗೋವಳರಾಯ ||
ಏಳು ಮಂದರಧರ ಗೋವಿಂದ ಫಣಿಶಾಯಿ ಏಳಯ್ಯ ನಲಿದು ಉಪ್ಪವಡಿಸಯ್ಯ ||

ಕ್ಷಿರಸಾಗರವಾಸ ಬೆಳಗಾಯಿತು ಏಳು ಮೂರುಲೋಕದರಸು ಒಡೆಯ ಲಕ್ಷ್ಮೀಪತಿ ||
ವಾರಿಜನಾಭನೆ ದೇವ ದೇವೇಶನೆ ಈರೇಳು ಲೋಕಕಾಧಾರ ಶ್ರೀ ಹರಿಯೇ ||

ಸುರರು ದೇವತೆಗಳು ಅವಧಾನ ಎನುತಿರೆಸುರ ವನಿತೆಯರೆಲ್ಲ ಆರತಿ ಪಿಡಿದರೆ ||
ನೆರೆದು ಊರ್ವಶಿ ಭರದಿ ನಾಟ್ಯವಾಡಲು ಕರುಣಿಸೊ ಪುರಂದರವಿಠಲ ನೀನೇಳೋ ||

Lyrics in English

Elayya shrihari belagayitu ||

Elu devaki tanaya nandana kanda elu govardhana govalaraya
Elu mandaradhara govinda phanishayi elayya nalidu uppavadisayya ||1||

Kshirasagaravasa belagayitu elu muru lokadarasu odeya lakshmipati
Varijanabhane deva deveshane irelu lokakaadhara shrihariye ||2||

Suraru devategalu avadhana enutire suravaniteyarella arati pididire
Neredu urvashi bharadi natyavadalu karuniso purandara vittala ninelo ||3||


Leave a Reply