ಎಂಥ ಪುಣ್ಯವೇ ಗೋಪಿ Entha punyave gopi

ಎಂಥಾ ಪುಣ್ಯವೇ ಗೋಪಿ ಎಂಥಾ ಭಾಗ್ಯವೆ ನಿನ್ನಇಂಥಾ ಮಗನ ಕಾಣೆನೇ ।। ಚಿಂತಿಸಿದರು ದೊರಕ ಚೆಲುವ ರಾಜಗೋಪಾಲ ಪೋಪುದೇ ಬಹು ನಿಜವೇ ।।

ಸರಸಿಜನಾಭನ ಸುಮ್ಮನೆ ಕಂಡರೆ ದುರಿತವೆಲ್ಲವು ಪೋಪುದೇ । ಸರಸದಿಂದಲಿ ಒಮ್ಮೆ ಸವಿ ಮಾತನಾಡಿದರೆ ಹರುಷ ಕೈಗೂಡುವುದೇ ಯಶೋದೆ ।।೧।।

ಊರೊಳಗೆ ಇವ ನೆರೆಹೊರೆಯರಂಜಿಕೆ ದೂರಿಕೊಂಬುವರಲ್ಲವೆ । ಅರಣ್ಯದಲಿ ನಾವು ಆಡಿದಾಟದ ಸುಖ ಯಾರಿಗಾದರೂ ಉಂಟೇನೆ ಒಂದೇನೆ ।। ೨।।

ನಿನ್ನ ಮಗನ ಕರೆಯೆ ಎಮ್ಮ ಪ್ರಾಣದ ದೊರೆಯ ಘನ್ನನು ಪರಬ್ರಹ್ಮನೆ । ಚನ್ನ ಶ್ರೀ ಪುರಂದರ ವಿಟ್ಠಲರಾಯನ ನಿನ್ನಾಣೆ ಬಿಡಲಾರೆವೇ ಕೇಳೆ ಯಶೋದೆ ।।೩।।

Lyrics in English

Entha punyave gopi entha bhagyave yashode intha magana kanene ||

Chttisidaru doraka cheluva rajagopala bhranti matugalallave bahu nijave ||

Sarasija nabhana summane kandare duritavellavu povude |
sarasadindali omme savi matanadidare harusha kai kuduvude yashode ||

Urolage illi nere horeyaranjike duru tumbitallave |
aranyadali navu Adidatada sukha yarigadaru untene ondene ||

Ninna magana kareya enna pranada doreya ghannanu parabrahmane
chenna shrI purandara vittalarayana ninnane bidalarene kele yashode ||


Leave a Reply