ಸಾಮಾನ್ಯವಲ್ಲ ಶ್ರೀ ಹರಿಯ / Samanyavalla sri hariya

ಸಾಮಾನ್ಯವಲ್ಲ ಶ್ರೀ ಹರಿಯ ಸೇವೆ ಪಾಮರ ಜನರಿಗೆ ಸಾಮಾನ್ಯವಲ್ಲ||pa||

ಸಾಮಜ ವರದನ ಪ್ರೇಮದಿ ನೆನೆವುದು ತಾಮಸ ಬುದ್ಧಿಯ ತಾ ತಗ್ಗಿಸದೆ ||a.pa||

ಅಂತರ ಮಲಿನವಳಿಯಬೇಕು ಸಂತತ ಶ್ರವಣದಿ ಶ್ರೀಕಾಂತನ ಚರಿತ ಕೇಳಲು ಬೇಕು
ಸಂತತವಿರಬೇಕು ಸಂತ ಜನರ ಗುಣ ನಿರಂತರದಲಿ ತಾ ಚಿಂತಿಸಬೇಕು |

ಜ್ಞಾನ ಕರ್ಮೇಂದ್ರಿಯ ನಿಗ್ರಹಿಸಿ ಜ್ಞಾನವ ಸಂಗ್ರಹಿಸಿ ಹೀನ ವೃದ್ಧಿಗಳೆರಡಕೆ ತಾ ಸಹಿಸಿ
ದೀನತೆಯನು ವಹಿಸಿ ಮಾನಾಪಮಾನ ಸಮಾನವೆಂದರಿತು ನಿಧಾನದಿ ಹರಿ ಗುಣ ಧ್ಯಾನವ ಮಾಳ್ಪುದು |

ಸರ್ವಾಂತರ್ಯಾಮಿ ಶ್ರೀ ಹರಿಯೆಂದು ಸರ್ವೇಶ್ವರನೆಂದು ಸ್ವರಮಣನೆಂದು
ಸರ್ವಾನುಗ್ರಹನೆಂದು ಸರ್ವ ಮೂರುತಿ ಪುರಂದರ ವಿಟ್ಠಲನ ಸರ್ವದಾ ಧ್ಯಾನಿಸಿ ಗರ್ವವಳಿಯಬೇಕು |

Lyrics in English

Samanyavalla sri hariya seve pamara janarige samanyavalla ||pa||

Samaja varadana premadi nenevudu tamasa buddhiya ta taggisade ||a.pa||

Antara malinavaliyabeku santata shravanadi srikantana charita kelalu beku
Santatavirabeku santa janara guna nirantaradali ta chintisabeku |

Jnana karmendriya nigrahisi jnaanava sangrahisi hina vruddhigaleradake ta sahisi
Dinateyanu vahisi maanapamaana samanavendaritu nidhaanadi hari guna dhyanava malpudu |

Sarvantaryami sri hariyendu sarvehsvaranendu svaramananendu
Sarvanugrahanendu sarva muruti purandara vitthalana sarvadaa dhyanisi garvavaliyabeku |


Leave a Reply