
ಎಂತು ವರ್ಣಿಪೆ ನಮ್ಮಮ್ಮಾ |
ಯಂತ್ರೋದ್ಧಾರಕನಾಗಿ ಮೆರೆವನಾ ||pa||
ಕೋತಿ ರೂಪದಲಿ ಬಂದು | ಭೂತಳಕೆ ಬೆಡಗು ತೋರಿ ||
ಈ ತುಂಗಭದ್ರೆಯಲ್ಲಿ | ಖ್ಯಾತಿಯಾಗಿಪ್ಪ ಯತಿಯಾ||1||
ಸುತ್ತಲು ವಾನರ ಬದ್ಧ | ಮತ್ತೆ ವಲಯಾಕಾರ ಮಧ್ಯ ||
ಚಿತ್ರಕೋಣ ಅದರೊಳು | ನಿತ್ಯದಲಿಯಿಪ್ಪ ಯತಿಯಾ ||2||
ವ್ಯಾಸ ಮುನಿರಾಯರಿಂದ | ಈ ಶಿಲೆಯೊಳಗೆ ನಿಂದು ||
ಶ್ರೀಶ ವಿಜಯವಿಠ್ಠಲನ್ನ | ಏಸು ಬಗೆ ತುತಿಪನ್ನ ||3||
Lyrics in English
Entu varnipe nammamma |
Yantroddharakaànagi merevana||pa||
Koti rupadali bandu | butalake bedagu tori ||
I tungabadreyalli | kyatiyagippa yatiya ||1||
Suttalu vanara baddha | matte valayakara madhya ||
Chitrakona adarolu | nityadaliyippa yatiya ||2||
Vyasa munirayarinda | i shileyolage nindu ||
Shrisha vijayaviththalanna | esu bage tutipanna ||3||