
ಜೋಗಿ ಬಂದನೋ ಗೋವಿಂದಾ | ನಮ್ಮ |
ಬಾಗಿಲಿಗೆ ನಡೆ ತಂದಾ ||
ಬೇಗನೇ ಪವಡಿಸು ಕಂದಾ | ನಾನು |
ಜೋಗುಳ ಪಾಡುವೆ ಛಂದಾ ||
ಗೋಗಮನನಾಗಿ ಶ್ರೀ ಗಿರಿಜೆಯ ಕೂಡಿ |
ಯೋಗಿಗಳರಸನು ಝಗ ಝಗಿಸುವ ||ಪ||
ಜಡೆಯಲಿ ಗಂಗೆಯ ಧರಿಸಿ ಮುಂ |
ಗುಡಿಯಲಿ ಚಂದ್ರನನಿಲಿಸಿ |
ಫಣಿ ಕುಂಡಲ ವಿರಿಸಿ|
ಬಿಡದೆ ವಿಷವನುಂಡು ಕಡುಗಪ್ಪುಗೋರಳಲಿ |
ಒಡನೆ ರುಂಡಮಾಲೆಯ ಗಡಬಡಿಸುವ || 1 ||
ಇಟ್ಟ ವಿಭೂತಿಯತನುವಾ | ಶಿವ |
ತೊಟ್ಟ ರುದ್ರಾಕ್ಷದಿ ಮೆರೆವಾ |
ದುಟ್ಟಿಹ ಹುಲಿಚರ್ಮಾಂಬರವಾ |
ನೆಟ್ಟನೆ ಡವರವ | ಮುಟ್ಟಿ | ನುಡಿಸುತಲಿ |
ಛಟ ಫಟ ಧ್ವನಿಯಾರ್ಭಟದ ವೈರಾಗಿ || 2 ||
ಶ್ರೀರಾಮನಾಮವ ಒಲಿದು ತಾನು ಕರದಿಕಪಾಲವ ಪಿಡಿದು |
ಧರೆಯೊಳು ಭಿಕ್ಷೆಯ ನೇವದಿಂದ ಹರ ತಿರುಗುವ ಸಿಂಧು |
ಗುರು ಮಹಿಪತಿ ಪ್ರಭು ಕರನಾಟಕದಲಿ ಅವತರಿಸಿದ ಗೋಕುಲದ ಶಿರಿನೋಡಲಾಗಿ || 3 ||
Lyrics in English
Jo jo govinda …
Jogi bandaano govindaa … namma | baagilinaa nade tanda | begane pavadiso kandaa ||2|| naanu jogula haaduve mudadinda | gogamananaagi sri girijeya koodi | yogigalarasanu jaga jagisuva || jogi bandaano||
Jadeyali gangeya dharisi mundudiyali chandrana nillisi | phani kundalavirisi | bidade vishavanundu kadugappugoralali| odane rundamaaleya gadabadisuva ||jogi bandaano||
Itta vibhootiya tanuva shiva totta rudrakshadi mereva | duttiha hulicharmaambaravaa | nettane davarava | mutti | nudisutali | chata phata dhwaniyaarbhatada vairaagi || ||jogi bandaano||
Sriraama naamava olidu taanu karadi kapaalava pididu | dhareyolu bhiksheya nepadinda hara tiruguva vijnaana sindhu | guru mahipati prabhu karanaatakadali avatarisida gokulada sirinodalaagi || jogi bandaano||