ಕಣ್ಣಾರೆ ಕಂಡೆ ನಾ ಅಚ್ಯುತನಾ /Kannaare kande naa achyutana

ಕಣ್ಣಾರೆ ಕಂಡೆ ನಾ ಅಚ್ಯುತನಾ ಕಂಚಿ ಪುಣ್ಯಕೋಟಿ ಕರಿರಾಜ ವರದನಾ. ||ಕಣ್ಣಾರೆ||
ಕಣ್ಣಾರೆ ಕಂಡೆ ನಾ ಅಚ್ಯುತನಾ…

ವರಮಣಿ ಮುಕುಟ ಮಸ್ತಕನಾ ಸುರವರಸನಕಾದಿ ವಂದಿತ ಪಾದ ಯುಗನ |
ತರುಣಿ ಲಕ್ಷ್ಮಿ ಮನೋಹರನಾ ಪೀತಾಂಬರದುಡುಗೆಯಲಿ ರಂಜಿಸುವ ವಿಗ್ರಹನ
||ಕಣ್ಣಾರೆ||

ಕಸ್ತೂರಿ ತಿಲಕನೊಸಲನ ತೋರ
ಮುತ್ತಿನ ಹಾರ ಪದಕ ಧರಿಸುವನ |
ಎತ್ತಿದ ಅಭಯ ಹಸ್ತದವನ ತನ್ನ ಭಕ್ತರ ಸ್ತುತಿಗೆ ಹಾರೈಸುವನ ||ಕಣ್ಣಾರೆ||

ತುಂಗ ಚತುರ್ಭುಜದವನ ಶುಧ್ಧ ಮಂಗಳ ರೇಖೆಯ ಅಂಗದಲಿ ಒಪ್ಪುವನ |
ಶ್ರಂಗಾರ ಕಂಬುಕಂದರನ ದೇವ ಗಂಗೆಯ ಪಿತ ಪುರಂದರವಿಠ್ಠಲನಾ..||ಕಣ್ಣಾರೆ||

Lyrics in English

Kannaare kande naa achyutana kanchi punyakoti kariraja varadanaa ||kannaare||

Varamani mukuta mastakana suravara sanakaadi vandita paada yugana|taruni lakshmimanoharanaa pitaambaradudugeyali ranjisuva vigrahana ||kannaare||

Kasturi tilakanosalana tora muttina haara padaka dharisuvana| ettida abhaya hastadavana tanna bhaktara stutige haaraisuvana||kannaare||

Tunga chaturbhujadavana shudha mangala rekheya angadali oppuvana| shrungaara kambukandarana deva gangeya pita purandaravithalana…||kannaare||


Leave a Reply