
ಕಂದ ಹಾಲ ಕುಡಿಯೋ ಎನ್ನ ಗೋ-
ವಿಂದ ಹಾಲ ಕುಡಿಯೋ ||ಪ||
ಮಂದರಧರ ಗೋವಿಂದ ಮುಕುಂದ
ಕಂದ ಹಾಲ ಕುಡಿಯೋ ||ಅ||
ಶೃಂಗಾರವಾದ ಗೋವಿಂದ ಚೆನ್ನ
ಪೊಂಗೊಳಲನೂದುತ ಬಂದ
ಅಂಗನೇರು ನಿನ್ನ ಚಂದ ನೋಡಿ
ಭಂಗಪಟ್ಟರು ಕಂಡ ದೇವಯ್ಯ ||
ಆಕಳ ಬಳಿಗೆ ಓಡಾಡಿ ಹರಿ
ಶ್ರೀಕಾಂತೇರ ಒಡಗೂಡಿ
ಲೌಕಿಕ ಆಟಗಳಾಡಿ ನಮಗೆ
ಬೇಕೆಂಬೋ ಸುಖವೀವ ಕಂದ ದೇವಯ್ಯ ||
ಸದಮಲ ಯೋಗಿಗಳೆಲ್ಲ ಪಾದ-
ಪದುಮವ ನಂಬಿದರೆಲ್ಲ
ಯದುಕುಲತಿಲಕ ಗೋಪಾಲ ಹಯ-
ವದನ ಪುರಂದರವಿಠಲ ||
Lyrics in English
Kanda haala kudiyo enna Govinda haala kudiyo ||pa||
Mandaradhara Govinda mukunda Kanda haala kudiyo ||a.pa||
Shrungaravada Govinda chenna, pongolalanooduta Banda | anganeru ninna Chanda nodi, bhangapattaru Kanda devayya ||
Aakala balige odaadi hari, srikantera odagudi | loukika aatagalaadi namage, bekembo sukhaveeva Kanda devayya ||
Sadamala yogigalella pada padumava nambidarella | yadukulatilaka gopàla hayavadana purandaravittala ||