ನಿನ್ನ ದರ್ಶನಕೆ ಸ್ವಾಮೀ ನಿನ್ನ / Ninna darushanake swami ninna

ನಿನ್ನ ದರ್ಶನಕೆ ಸ್ವಾಮೀ ನಿನ್ನ ದರ್ಶನಕೆ
ಸ್ವರ್ಣಕ್ಷೇತ್ರ ಗುಡಿಯಲ್ಲಿರುವ ನಿನ್ನ ದರ್ಶನಕೆ
ಹಳ್ಳ ದಿಣ್ಣೆಗಳ ಕಾಡು ಕಳ್ಳುಮುಳ್ಳುಗಳ
ದಾಟಿ ಉಲ್ಲಾಸದಿ ಇಂದು
ನಾವು ಬರುವೆವಯ್ಯಪ್ಪ ||ನಿನ್ನ ದರ್ಶನಕೆ||

ಮಂಡಲ ವ್ರತಮಾಡಿ ಮಾಲೆ ಹಾಕಿ ಕೊಂಡೆವು
ಇರುಮುಡಿ ಕಟ್ಟಿ ನಾವು ತಲೆಮೇಲಿಟ್ಟೆವು
ಪಂಪೆಯಲಿ ಮಿಂದು ನಾವು ಪೂಜೆ ಮಾಡಿದೆವು
ಪಂಪಾಮೇಳ ಹಾಡಿ ಕೊಂಡು ಬರುವೆವಯ್ಯಪ್ಪ
ಏರುವುದು ಕಷ್ಟ ಮೇಲೆ ಏರುವುದು ಕಷ್ಟ
ನಿನ್ನ ಕೈಯ ನೀಡಿ ಮಲೆಗಳ ಮೇಲೆ
ಸೇರಿಸು ನನ್ನಯ್ಯ ||ನಿನ್ನ ದರ್ಶನಕೆ||

ಹಂತ ಹಂತಕೆ ಕೈಯ ನಾವು ಮುಗಿಯುವೆವಯ್ಯಪ್ಪ
ತೆಂಗಿನಕಾಯಿ ಅಡಿಗಡಿಗೆ ಹೊಡೆವೆವಯ್ಯಪ್ಪ
ಹಂತ ಹದಿನೆಂಟನ್ನು ಮುಟ್ಟಿ ಬರುವೆವಯ್ಯಪ್ಪ
ನಿನ್ನ ಮುಂದೆ ನಿಂತು ನಾವು ಬೇಡುವೆವಯ್ಯಪ್ಪ
ದೋಷ ತೀರಿಸು ಸ್ವಾಮಿ ಮೋಕ್ಷ ಕರುಣಿಸು
ಸ್ವಾಮಿ ಕಂಗಳ ತೆರೆದು ನಮ್ಮ ದುಃಖ ಹೋಗಲಾಡಿಸು ||ನಿನ್ನ ದರ್ಶನಕೆ||

ಸ್ವಾಮಿಯೇ ಶರಣು ಅಯ್ಯಪ್ಪ
ಹರಿಹರಸುತನೇ ಶರಣು ಅಯ್ಯಪ್ಪ
ಹರಿಹರಸುತನ್ ಆನಂದಚಿತ್ತನಯ್ಯನಯ್ಯಪ್ಪ
ಸ್ವಾಮಿಯೇ ಶರಣು ಅಯ್ಯಪ್ಪ

Lyrics in English

Ninna darushanake swami ninna darushanake
swarnakshetra gudiyalliruva ninna darushanake
halla dinnegala kadu kallumullugala
dati ullasadi indu
navu baruvevayyappa || ninna darushanake||


Mandala vruta madi male haki kondevu
erumudi katti navu talemelittevu
papeyali mindu navu pooje madidevu
pampamela hadikondu baruvevayyappa
aruvudu kashta mele aruvudu kashta
ninna kaiyya needi malegala mele
serisu nannayya || ninna darshanake ||


Hanta hantake kaiya navu mugivevayyappa
tenginakayi adigadige hodevevayyappa
hanta hadinentannu mutti baruvevayyappa
ninna munde nintu navu beduvevayyappa
dosha teerisu swami moksha karunisu
swami kangala teredu namma dukha hogaladisu || ninna darshanake||


Swami sharanu ayyappa
hariharasutane sharanu ayyappa
hariharasutane anandachitaanayyappa
swamiye sharanu ayyappa


Leave a Reply