ನರಜನ್ಮ ಸ್ಥಿರವೆಂದು ನಾನಿದ್ದೆನೋ / Narajanma stiravendu naniddeno

ನರಜನ್ಮ ಸ್ಥಿರವೆಂದು ನಾನಿದ್ದೆನೋ ರಂಗ
ಬರಿದೇ ಕಾಲ ಕಳೆದೆನೊ ಹರಿಯೇ ||

ಆಸೆಯೆಂಬುದು ಎನ್ನ ಕ್ಲೇಷ ಪಡಿಸುತಿದೆ
ಘಾಸಿಯಾದೆನೊ ಹರಿ ನಾರಾಯಣ ||
ವಾಸುದೇವನೇ ನಿನ್ನ ಧ್ಯಾನವ ಮಾಡದೆ
ನಾಶವಾಯಿತು ಜನ್ಮ ಮೋಸ ಹೋದೆನೊ ಕೃಷ್ಣ ||

ಪರರ ಸೇವೆಯ ಮಾಡಿ ಪರರನ್ನೆ ಕೊಂಡಾಡಿ
ಮರುಳುತನದಲಿ ಮತಿಹೀನನಾದೆ ||
ನೆರೆನಂಬಿದೆನೊ ಕೃಷ್ಣಾ ಕರುಣದಿಂದಲಿ ಎನ್ನ
ಮರೆಯದೆ ಸಲಹಯ್ಯ ಪುರಂದರ ವಿಠ್ಠಲ ||

Lyrics in English

Narajanma stiravendu naniddeno ranga |
baride kala kaledeno hariye ||

Aseyembudu enna kleshapadisutide |
ghasiyadeno hari narayana ||
Vasudevane ninna dhyanava madade |
nashavayitu janma mosahodeno krishna ||


Parara seveya madi pararanne kondadi |
marulutanadali matiheenanade ||

nerenambideno krishna karunadindali enna |
mareyade salahayy purandara vittala ||

************************

Leave a Reply