ಲೋಕಮಾತೆ ವಿಮಲ ಚರಿತೆ ದೇವಿ / Lokamate vimala charite

ಲೋಕಮಾತೆ ವಿಮಲ ಚರಿತೆ ದೇವಿ ಶಾರದಾಂಬೆಯೆ
ಪಾಕಶಾಸನಾದಿವಂದ್ಯೆ  ಕಮಲಭವನ ಮಡದಿಯೆ || 

ಕಮಲನೇತ್ರೆ ಇಂದುವದನೆ ಕೋಮಲಾಂಗಿ ಸುಂದರಿ
ಭ್ರಮರವೇಣಿ ಹಂಸಗಮನೆ ಕೀರವಾಣಿ ಗುಣಮಣಿ || 

ವಿದ್ಯೆಗಳಿಗೆ ಜನನಿಯಾದೆ ಮುದ್ದು ನವಿಲನೇರಿದೆ 
ವಿದ್ಯೆಗಳನು ಕರುಣಿಸಮ್ಮ ದೀನನಾಗಿ ಬೇಡುವೆ ||

ಶೃಂಗಗಿರಿಯ ಪುರನಿವಾಸೆ ಪಾಹಿ ಶಾರದಾಂಬೆಯೆ
ಸೆರಗನೊಡ್ಡಿ ಬೇಡಿಕೊಳುತ ಪಾದ ಪದ್ಮಕೆರಗುವೆ ||

Lyrics in English

Lokamate vimala charite Devi sharadambeye
pakashasanadivandye kamalabhavana madadiye ||

Kamalanetre induvadane komalangi sundari
bhramaraveni hamsagamene keeravani guamani ||

Vidyegalige jananiyade muddu navilaneride
vidyegalanu karunisamma deenanagi beduve ||

Shrungagiriya puranivase pahi sharadambeye |
seraganoddi bedikoluta paada padmakeraguve ||


Leave a Reply