ಇಂದಿನ ದಿನ ಸುದಿನಾ ನಾಳೆ ಎಂಬುದು / Indina Dina sudina nale embudu

ಇಂದಿನ ದಿನ ಸುದಿನಾ
ನಾಳೆ ಎಂಬುದು ಬಲು ಕಠಿಣ  ||ಇಂದಿನ||
ಮಂದಮತಿಯೆ ನಿನಗಾಗಲೋ ಈಗಲೋ ||೨||
ಗೋವಿಂದನ ನಾಮ ಸ್ಮರಣೆ ಮಾಡುವುದಕೆ ||೨|| ||ಇಂದಿನ ||

ಸಾಧು ಸಜ್ಜನರಿಂದ ಪಾಪವು
ಛೇದನವಾಗುವುದು ||ಸಾಧು||
ಈಗಲೊ ಆಗಲೊ ಇನ್ಯಾವಾಗಲೋ ||೨||
ಗೋವಿಂದನ ನಾಮ ಸ್ಮರಣೆ ಮಾಡುವುದಕೆ ||೨||     ||ಇಂದಿನ||

ಯೋಗಿಗಳೊಡನಾಡಿ ವಿಷಯದ
ಭೋಗವನೀಡಾಡಿ ||ಯೋಗಿ||
ಈಗಲೊ ಆಗಲೊ ಇನ್ಯಾವಾಗಲೋ||೨||
ಗೋವಿಂದನ ನಾಮ ಸ್ಮರಣೆ ಮಾಡುವುದಕೆ ||೨||     ||ಇಂದಿನ||

ಅಸ್ಥಿರ ದೇಹವಿದು
ನಾನಾ ಅವಸ್ಥೆ ಆಗದಿರದೂ||ಅಸ್ಥಿರ||
ಕಸ್ತೂರಿರಂಗನ  ಪುರಂದರವಿಠ್ಠಲನ||೨||
ಅಸ್ತಮಾನ  ಬಿಡನೊಡನಾಡುವುದಕೆ ||೨|| ||ಇಂದಿನ||

Lyrics in English

Indina Dina sudina
nale embodu balu katina ||

Mandamatiye ninagagalo eegalo |
govindana nama smarane maduvudake || indina ||

Sadhu sajjanarinda papavu
chedanavaguvudu ||
eegalo agalo inyavagalo
govindana namasmarane maduvudake ||

Yogigalodanadi vishayada
bhogavaneedadi ||
eegalo agalo inyavagalo
govindana namasmarane maduvudake ||

Astira dehavidu
nana avaste agadiradoo ||
kasturirangana purandaravittalana |
astamana bidanodanaduvudake ||

Leave a Reply