ಕಲ್ಯಾಣಂ ತುಳಸಿ ಕಲ್ಯಾಣಂ /Kalyanam tulasi kalyanam

ರಚನೆ : ಪುರಂದರದಾಸರು

ಕಲ್ಯಾಣಂ ತುಳಸಿ ಕಲ್ಯಾಣಂ           ||ಪ||

ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಳಸಿಗೆ
ಬಲ್ಲಿದ ಶ್ರೀ ವಾಸುದೇವನಿಗೆ    ||ಅ.ಪ||

ಅಂಗಳದೊಳಗೆಲ್ಲ ತುಳಸಿಯ ವನಮಾಡಿ
ಶೃಂಗಾರವ ಮಾಡಿ ಶೀಘ್ರದಿಂದ
ಕಂಗಳ ಪಾಪವ ಪರಿಹರಿಸುವ ಮುದ್ದು
ರಂಗ ಬಂದಲ್ಲಿ ತಾ ನೆಲೆಸಿದನು ||೧||

ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು
ತಂದ ಶ್ರೀಗಂಧಾಕ್ಷತೆಗಳಿಂದ ಸಿಂಧುಶಯನನ
ವೃಂದಾವನದಿ ಪೂಜಿಸೆ
ಕುಂದದ ಭಾಗ್ಯವ ಕೊಡುತಿಹಳು    ||೨||

ಭಕ್ಷ್ಯ ಭೋಜ್ಯಂಗಳ ನೈವೇದ್ಯವನಿತ್ತು
ಲಕ್ಷ ಬತ್ತಿಯ ದೀಪವ ಹಚ್ಚಿ ಅಧೋಕ್ಷಜ
ಸಹಿತ ವೃಂದಾವನ ಪೂಜಿಸೆ
ಸಾಕ್ಷಾತ್ ಮೋಕ್ಷವ ಕೊಡುತಿಹಳು||೩||

ಉತ್ಥಾನ ದ್ವಾದಶಿ ದಿವಸದಿಂದಲಿ
ಕೃಷ್ಣಉತ್ತಮ ತುಳಸಿಗೆ ವಿವಾಹವ
ಚಿತ್ತನಿರ್ಮಲರಾಗಿ ಮಾಡಿದವರಿಗೆ
ಉತ್ತಮ ಗತಿ ಈವ ಪುರಂದರವಿಠಲ ||

Lyrics in English

Kalyanam tulasi kalyanam ||pa||

kalyanave namma krishna shri tulasige ballida shri vasudevanige

Angaladolagella tulasiya vana madi shrngarava madi shigradinda 
kangala papava pariharisuva muddu ranga bandalli ta nelisidanu ||1||

Mindu madiyanuttu sandehava bittu tanda shri gandhakshategalinda 
sindhu shayanana vrndavanadi pujise kundada bhagyava kodutihalu ||2||

Bhakshya bhojyangala naivedyavanittu laksha battiya dipava hachi 
adhokshaja sahita vrndavana pujise sakshat mokshava kodutihalu ||3||

Uddhana dvadashi divasadindali krishna uttama tulasige vivaha 
chitta nirmalaragi madidavarige uttama gati iva purandara vittala||4||

———————————————–

Leave a Reply