ಬಾರೆ ಸಖಿ ಪೋಗುವ ರಾಸ / Baare sakhi poguva raasa
ಬಾರೆ ಸಖಿ ಪೋಗುವ ರಾಸ ಕ್ರೀಡೆಯಾಡುವಸಾರಸಾಕ್ಷ ಕೃಷ್ಣನು ತಾ ಕೊಳಲನೂದುವ |ಕೊಳಲನೂದುವಾ ಕೃಷ್ಣ ಕೊಳಲನೂದುವ || ಜಾರನೆಂದು ಸಣ್ಣಮಾತನಾಡಿದ್ದಾಯಿತು ಚೋರನೆಂದು ಬಹಳ ದೂರುಮಾಡಿದ್ದಾಯಿತು | ಮೂರು ನಿಮಿಷ ಅವನ ಮರೆಯಲಾಗದಾಯಿತು |ಬೀರುತಿರುವ ಮೋಹಜಾಲ ಸಡಲದಾಯಿತು ||||ಬಾರೆ ಸಖಿ|| ಯಾವನೀತನೆಂದು ಚಿಂತೆ ಮಾಡಿದ್ದಾಯಿತು…