ಅಂದವಾದ ತೋಯಜದ / Andavaada toyajada

ಅಂದವಾದ ತೋಯಜದ ಚಂದವಾದ ಪಾದದಿಂದ
ಓಡಿಬಾರೋ ರಂಗ ಸಾಗಿ ಬಾರೋ
||ಅಂದವಾದ||

ಸುತ್ತಮುತ್ತ ಗುಮ್ಮಗಳು ಎತ್ತಿಕೊಂಡು ಒಯ್ಯುವ ನಿನ್ನ
ಸುತ್ತಿ ಸುತ್ತಿ ತಾಳಲಾರೆ ಓಡಿ ಬಾರೋ ||ಸುತ್ತಮುತ್ತ||
ಕತ್ತಲಾಯಿತೆನ್ನ ಕಂದ ಸಾಗಿ ಬಾರೋ
||ಅಂದವಾದ||

ನೊರೆ ಹಾಲು ಮೊಸರು ಬೆಣ್ಣೆ ಕರೆವ ತುರುಗಳು ಎಲ್ಲಾ
ಹರಿ ಎಲ್ಲಿ ಎನ್ನುತಲಿವೆ ಓಡಿ ಬಾರೋ ||ನೊರೆ||
ಕರೆದರೆ ಸುಮ್ಮನೆ ನೀನು ಓಡಿ ಬಾರೋ
||ಅಂದವಾದ||

ಕಂಡ ಕಂಡ ಜನವು ನಿನ್ನ ಪುಂಡನೆಂದು ಸಾರುತ್ತಿದೆ
ಪುಂಡನೇನೊ ನೀನು ಓಡಿಬಾರೋ ||ಕಂಡ||
ಪ್ರಚಂಡ ಆನಂದ ವಿಠ್ಠಲ ಸಾಗಿ ಬಾರೋ
||ಅಂದವಾದ||

Lyrics in English

Andavaada toyajada chandavada paadadinda odibaaro ranga saagi baaro ||andavaada||

Suttamutta gummagalu attikondu oyyuva ninna | sutti sutti taalalaare odi baaro ||sutta mutta|| kattalaayitenna kanda saagi baaro ||andavaada toyajada||

Nore haalu mosaru benne | kareva turugalu ellaa hari elli ennutalive odi baaro ||nore||. Karedare summane neenu odi baaro || andavaada toyajada||

Kanda kanda janavu ninna pundanendu aaruttide| pundaneno neenu odibaaro ||kanda kanda||. Prachanda anandavittala saagibaaro ||andavaada toyajada||


Leave a Reply