
by Vidya Prasannateertha
ವಿದ್ಯಾಪ್ರಸನ್ನತೀರ್ಥರು
ಆಟವನಾಡುವ ಬಾರೋ ಶ್ರೀ ಕೃಷ್ಣ ||ಪ||
ನೋಟಕೆ ಜನಗಳ ಕೂಟವು ಕಾದಿದೆ ||ಅ.ಪ||
ದೊರೆಯು ನೀನಂತೆ ದೊರೆಯು ವಾಸಿಸಲು
ಅರಮನೆ ಎಂದಿದನರಿಯಬೇಕಂತೆ
ಪರಿಪರಿಯಲಿ ನಿನ್ನ ಸೇವೆಯು ಮಾಡಲು
ಪರಿಚಾರಕ ನಾನಿರಬೇಕಂತೆ ||1||
ತಂದೆಯು ನೀನಂತೆ ತಾಯಿ ರುಕ್ಮಿಣಿಯಂತೆ
ಮಂದಿಗಳೆಲ್ಲರು ಮಕ್ಕಳು ನಿನಗಂತೆ
ಮುಂದೆ ಎಮಗೆ ನಿನ್ನ ದಿವ್ಯ ರಾಜ್ಯದಲಿ
ಒಂದೊಂದು ಭಾಗವ ಬರೆದಿಡಬೇಕಂತೆ ||2||
ಬಿಂಬವು ನೀನಂತೆ ಕನ್ನಡಿಯೊಳು ಪ್ರತಿ
ಬಿಂಬವು ನಾನಂತೆ ಯೋಗಿ ಪ್ರಸನ್ನ
ಬಿಂಬದ ವಿಧವಿಧ ಧ್ಯಾನದಿಂದ ಪ್ರತಿ
ಬಿಂಬದಿ ಬಿಂಬವ ನೋಡುವೆನಂತೆ ||೩||
Lyrics in English
Aatavanaduva baro Shree Krishna ||pa||
Notake janagala kootavu kadide ||a.pa||
Doreyu neenante doreyu vasisalu
aramane endidanariyabekante |
paripariyali ninna seveyu madalu
paricharaka nanirabekante ||1||
Tandeyu neenante taayi rukminiyante
mandigalellaru makkalu ninagante |
munde emage ninna divya rajyadali
ondondu bhagava baredidabekante || 2||
Bimbavu neenante kannadiyolu prati
bmbavu naanante yogi Prasanna bimbada
vidhavidha dhyanadinda prati
bimbadi bimbava noduvenante ||3||