
ಆರಂಭದಲಿ ನಮಿಪೆ ಬಾಗಿ ಶಿರವ |ಹೇರಂಬ ನೀನೊಲಿದು ನೀಡೆಮಗೆ ವರವ ||ಪ||
ದ್ವಿರದವದನನೆ ನಿರುತ ದ್ವಿರದವರದನ ಮಹಿಮೆ ಹರುಷದಲಿ ಕರಜಿಹ್ವೆ ಎರಡರಿಂದ |ಬರೆದು ಪಾಡುವುದಕ್ಕೆ ಬರುವ ವಿಘ್ನವ ತರಿದು ಕರುಣದಿಂದಲಿ ಎನ್ನ ಕರ ಪಿಡಿದು ಸಲಹೆಂದು ||೧||
ಕುಂಭಿಣಿಜೆ ಪತಿರಾಮ ಜಂಬಾರಿ ಧರ್ಮಜರು ಅಂಬರಾಧಿಪ ರಕುತಾಂಬರನೆ ನಿನ್ನ || ಸಂಭ್ರಮದಿ ಪೂಜಿಸಿದರೆಂಬ ವಾರುತೆ ಕೇಳಿ | ಹಂಬಲವ ಸಲಿಸೆಂದು ನಂಬಿ ನಿನ್ನಡಿಗಳಿಗೆ ||೨||
ಸೋಮಶಾಪದ ವಿಜಿತ ಕಾಮ ಕಾಮಿತದಾತ ವಾಮದೇವನ ತನಯ ನೇಮದಿಂದ || ಶ್ರೀ ಮನೋಹರನಾದ ಶ್ಯಾಮಸುಂದರ ಸ್ವಾಮಿ | ನಾಮ ನೆನೆಯುವ ಭಾಗ್ಯ ಪ್ರೇಮದಲಿ ಕೊಡು ಎಂದು ||೩||
Lyrics in English
Arambhadali namipe baagi shirava |heramba ninolidu nudemage varava ||pa||
Dviradavadanane niruta dviradavaradana mahime |harushadali karajihve eradarinda |baredu paaduvudakke baruva vighnava taridu karunadindali enna kara pididu salahendu ||1||
Kumbhinije patiraama jambaari dharmajaru ambaraadhipa rakutaambarane ninna || sambhramadi pujisidaremba vaarute keli | hambalava salisendu nambi ninnadigalige ||2||
Somashaapada vijita kaama kaamitadaata vaamadevana tanaya nemadinda || shri manoharanaada shyaamasundara swami | naama neneyuva bhaagya premadali kodu endu ||3||