
ಇಂದು ನಿನ್ನ ಮೊರೆಯ ಹೊಕ್ಕೆ ವೆಂಕಟೇಶನೆ ||ಇಂದು||
ಎಂದಿಗಾದರೆನ್ನ ಕಾಯೊ ಶ್ರೀನಿವಾಸನೆ ||೨|| ||ಇಂದು||
ಶೇಷಗಿರಿಯವಾಸ ಶ್ರೀಶ ದೋಷರಹಿತನೇ ||ಶೇಷ||
ಏಸು ದಿನಕು ನಿನ್ನ ಪಾದ ದಾಸನು ನಾನೆ ||ಏಸು||
ಕ್ಲೇಶಗೈಸದಿರು ಎನ್ನ ಸ್ವಾಮಿಯು ನೀನೆ ||ಕ್ಲೇಶ|| || ಇಂದು ||
ಕಮಲನಯನ ಕಾಮಜನಕ ಕರುಣವಾರಿಧೇ ||ಕಮಲ||
ರಮೆಯನಾಳ್ವ ಕಮಲನಾಭ ಹೇ ದಯಾನಿಧೇ
ಯಮನ ಪುರದಿ ಶಿಕ್ಷಿಸದಿರು ಪಾರ್ಥಸಾರಥೇ ||ಇಂದು||
ಉರಗಶಯನ ಸುರರಿಗೊಡೆಯ ಸಿರಿಯ ರಮಣನೆ ||ಉರಗ||
ಶರಣಪಾಲ ಬಿರುದು ತೋರಿ ಪೊರೆವ ದೇವನೆ ||ಶರಣ||
ಕರುಣಿಸೆನಗೆ ಮುಕುತಿಯ ಪುರಂದರವಿಠಲನೆ ||ಇಂದು||
Lyrics in English
Indu Ninna moreya hokke venkateshane ||
endigadarenna kayo srinivasane || Indu ||
Sheshagiriya vasa shreesha dosharahitane |
esu dinaku Ninna pada dasanu naane |
kleshagaisadiru Enna swamiye neene || Indu ||
Kamalanayana kamajanaka karunavaridhe |
rameyanalva kamalanabha he dayanidhe |
yamana puradi shikshisadiru parthasarathe || Indu ||
Uragashayana surarigodeya siriya ramanana |
sharanapala birudu Tori poreva devane |
karunisenage mukutiyu purandaravittalana || Indu |