ಇಹಲೋಕ ಸುಖವೆಂಬ / Ehaloka sukhavemba kambaliyolagina

ಇಹಲೋಕ ಸುಖವೆಂಬ
ಕಂಬಳಿಯೊಳಗಿನ ಬುತ್ತಿ||ಇಹ||
ನಂಬಿ ನೀ ಕೆಡದಿರೂ… ಹೇ ಮನವೇ

ನಂಬಿ ನೀ ಕೆಡದಿರು ಇಹಲೋಕಸುಖವೆಂಬ
ಕಂಬಳಿಯೊಳಗಿನ ಬುತ್ತಿ ||ನಂಬಿ||
ನಿ ಬೆಲೆಯ ಊಟ ಪರಲೋಕ ಸುಖಸಾರ
ಎಂಬೋದೆ ನಿಜ ಭಕುತಿ , ಹೇ ಮನವೇ
||ನಂಬಿ||

ನ್ಯಾಯವಿಲ್ಲದೆ ನಿನ್ನ ಕಾಯ ಪೋಷಣೆಯೆ
ತೋಯದೊಳಗೆ ಹೋಮಾ
ಆಯಸವನು ಪಟ್ಟು ಮನೆಯ ಕಟ್ಟುವುದು
ಹೇಯ ಧೋರಲೆ ಧಾಮಾ
ಮಾಯಕೆ ಸಿಲುಕಿ ದಾಯಾದಿ ಗುಣಿಪುದೆ
ವಾಯಸಗಳ ಪ್ರೇಮಾ
ನೋಯದು ಮನಸ್ಸಿಗೆ ಹೇಯ ತಾ ಪುಟ್ಟದು
ನ್ಯಾಯ ಬುಧ್ಧಿಯ ಧಾಮಾ…
||ನಂಬಿ||

ಧಣಿಸಿ ಧಣಿಸಿ ದೇಹ ಧನವ
ಕೂಡಿಸುವುದೆ ನೊಣ ಜೇನಿನ ವ್ರತ್ತಿ
ಬಣಗು ದೈವಂಗಳ ಭಕ್ತಿಲರ್ಚಿಸುವುದೆ
ಹೆಣಕೆ ಮಾಡಿದ ಅರ್ತಿ
ವನಿತೆ ಸುತರು ಬಂದು ಜನ ಸ್ನೇಹವೆಂಬೋದು
ಪ್ರಣತಿಯೊಳಗಿನ ಜ್ಯೋತಿ
ಒಣಗ್ಹೋಗಲುಪಜೀವನವೆಂಬ ತೈಲವು
ಕ್ಷಣಕೆ ನಿಲ್ಲದು ಪ್ರೀತೀ…
||ನಂಬಿ||

ಆಶಿಸಿ ಅರ್ಥವ ಹರಿಯ ಸೇವಿಸುವಂತ
ದಾಸಾತ್ವದ ದಾಸಾ
ಆಸೆಯನು ಕೊಟ್ಟು ಭಾಷೆ ತಪ್ಪುವಂತ
ಈ ಕ್ಷಣದ ಕ್ಲೇಶಾ
ದಾಸತ್ವ ವಹಿಸದೆ ಕಾಶಿ ರಾಮೇಶ್ವರ
ದೇಶ ತಿರುಗಲಾಭಾಸ
ಹೇಸಿ ಸಂಸಾರದ ಕ್ಲೇಶವೆಂಬೋದು
ಕ್ರಷ್ಣೋಪಾಶನದಿಂದ ನಾಶ
||ನಂಬಿ||

ಹಲವು ತತ್ವಂಗಳ ಹಲುಬಿ ಪೇಳಿದರೇನು
ಪೊಲಬ ಪಿಡಿಯ ತನಕಾ
ಛಲವ ಪಿಡಿದರೇನು ತಿಳಿವಿಕೆ ನಿಜವಿಲ್ಲ
ಒಲುಮೆಯಾಗದನಕಾ
ಕೆಲಕಾಲ ಸುಜನರೊಳಾಡುತಿದ್ದರೇನು
ತಲೆಯ ಬಗ್ಗಿಸದನಕಾ
ಹಲವು ಸಾಧನಕೆಲ್ಲ ಒಲವು ಶ್ರೀಹರಿಯೆಂದು
ತಿಳಿಯ ಬಂದ ಮೋಚಕಾ…
||ನಂಬಿ||

ಎಷ್ಟು ಸಾಧನಗಳು ಕೂಡಿಟ್ಟರೇನಿನ್ನು
ದ್ರಿಷ್ಟಿಗೆ ಹರಿತೋರಾ…
ನಷ್ಟವಾಗುವ ಅಹಂಕಾರ ಒಂದು ಇದ್ದರೆ
ಶಿಷ್ಠ ಜನಕೆ ದೂರಾ
ಇಟ್ಟು ತೊಟ್ಟು ಬಹಳ ದಿಟ್ಟ ಸ್ತ್ರೀಯಳು
ಸ್ಪಷ್ಟ ಪುಷ್ಟಿಯ ಶ್ರಿಂಗಾರ
ಎಷ್ಟು ಶೋಭಿತಳಾಗೆ ಅವಳ ಪತಿಯು
ಕನಿಷ್ಠಳಾದವಳ ತೋರಾ…
||ನಂಬಿ||

ಗುಣತ್ರಯಕನುಸಾರ ಮಾಡಿದ
ಕರ್ಮಗಳುಣಬೇಡ ನಿನೀಗ
ಗುಣಿಸು ಶ್ರೀಹರಿಯನ್ನು ನಖಶಿಖತನಕ
ಹ್ರತ್ವಚನದೊಳಗೇ ಹೊರಗೇ
ಮನುಜ ಜನ್ಮ ಮಹಾ ಸುಕ್ರತದ ಫಲ
ನಿನಗೆ ಬಂದಿದೆ ಈಗಾ
ಕ್ಷಣಿಕವ ನಿತ್ಯವಸಾರ ಕಲೆವರ
ದಿನಪೋಗುತಿದೆ ಬೇಗಾ
||ನಂಬಿ||

ಗುರುಉಪದೇಶವೆಂಬುದು ಮಹಾದುರ್ಲಭ
ಪರಮ ಮಂಗಳಕರವೋ
ಕರೆಕರೆ ಸಂಸಾರ ಶರಧಿಯ ದಾಟಲು
ಹರಿಗೋಲು ಸ್ಥಾನೀಯವೋ
ದೂರಕೆ ಮರೆಯಬೇಡ ಗುರು ವಿಜಯರಾಯರ
ಚರಣವ ಸಾರೆಲವೋ…
ಪರಮ ಮಂಗಳ ಮೂರ್ತಿ ಗೋಪಾಲವಿಠ್ಠಲಾ||2||
ದೊರೆವನು ದೂರಿಲ್ಲವೋ…
||ನಂಬಿ||

Lyrics in English

Ehaloka sukhavemba kambaliyolagina buttti ||Eha|| nambi nee kedadiro …. he manave

Nambi nee kedadiru ehalokasukhavemba kambaliyolagina butti ||nambi|| ne beleya oota paraloka sukhasaara |embode nija bhakuti, he manave ….. ||nambi||

Nyayavillade ninna kaaya poshaneye toyadolage homa | aayasavanu pattu maneya kattuvudu heya dhorale dhama | mayake siluki daayadi gunipude vaayasagala prema | noyadu manassige heya taa puttadu nyaya buddhiya dhama ….. ||nambi||

Dhanisi dhanisi deha dhanava koodisuvude nona jenina vrutti | banagu daivangala bhaktilarchisuvude henake madida arti | vanite sutaru bandu jana snehavembodu pranatiyolagina jyoti | onagohgalupa jeevanavemba tailavu kshanake nilladu preeti …… ||nambi||

Aashisi arthava hariya sevisuvanta daasatvada dasa | aaseyanu kottu bhashe tappuvats ee kshanada klesha | dasatva vahisade kashi rameshwara desha tirugalabhasa | hesi samsarada kleshavembodu krishnopashanadinda nasha || nambi ||

Halavu tatvangala halubi pelidarenu polaba pidiya tanaka | chalava pididarenu tilivike nijavilla olumeyagadanaka | kelakaala sujanarolaadutiddarenu taleya baggisadanakaa | kelakala sujanaroladutiddarenu taleya baggisadanaka | halavu sadhanakkella olavu sri hariyendu tiliya banda mochakaa…… || nambi||

Eshtu sadhanagalu koodittareninnu drishtige hari toraa…… nashtavaguva ahankara ondu eddare shishta janake doora ….. ettu tottu bahala ditta streeyalu spashta pushtiyasringara | eshtu shobhitalage avala patiyu karishtaladavala toraaa || nambi||

Gunatrayakanusaara maadida karmagalunabeda neeniga, gunisu srihariyannu nakhashikha tanaka, hrutvachanadolage horage manuja janma maha sukrutada phala, ninage bandide eega kshanikava nityavasara kalevara dinapogutide bega ||nambi||

Gurupadeshavembudu mahadurlabha, parama mangalakaravo, karekare samsara sharadhiya daatalu, harigolu staaniyavo, dorake mareyabeda guru vijayarayara charanava sarelavo ….. Parama mangala murti gopalavittala ||2||dorevanu doorillavo …. ||Nambi||


Video/audio not available

Leave a Reply