ಈಸಬೇಕು ಇದ್ದು ಜೈಸಬೇಕು /Esabeku eddu jaisabeku

ಈಸಬೇಕು-ಇದ್ದು ಜೈಸಬೇಕು| ಹೇಸಿಕೆ ಸಂಸಾರದಲ್ಲಿ ಲೇಶ ಆಸೆ ಇಡದ ಹಾಗೆ ||ಪ||

ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು ಸ್ವಾಮಿ ರಾಮನೆನುತ ಪಾಡಿ ಕಾಮಿತವ ಕೈಕೊಂಬರೆಲ್ಲ ||೧||

ಗೇರುಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ| ಮೀರಿ ಆಸೆ ಮಾಡದ ಹಾಗೆ ಧೀರ ಕೃಷ್ಣನ ನೆನೆಯುವರೆಲ್ಲ ||೨||

ಮಾಂಸದಾಸೆಗೆ ಮತ್ಸ್ಯವು ಸಿಲುಕಿ ಹಿಂಸೆಪಟ್ಟ ಪರಿಯೊಳು | ಮೋಸ ಹೋಗದೆ ಪುರಂದರವಿಠಲ ಜಗದೀಶನೆನುತ ಕೊಂಡಾಡುವರೆಲ್ಲ ||೩||

Lyrics in English

Esabeku eddu jaisabeku | hesike samsaaradalli lesha aase edada haage || pa||

Tamarasa jaladante premavittu bhavadolu swami ramanenuta paadi kaamitava kaikombaralla ||

Geruhanninali beeja seridante samsaradi |meeri aase maadada haage dheera krishnana neneyuvarella ||2||

Mamsadaasege matsyavu siluki himsepatta | mosa hogade purandara vittala jagadeeshanenuta kondaaduvarella ||3||


Leave a Reply