ಉದಯಿಸಿದೆ ಮೂಡನದಿ / Udayiside moodanadi

ಉದಯಿಸಿದೆ ಮೂಡನದಿ ಚಿನ್ನದ ಕಿರಣ | ಹೊಳೆಯುತ್ತಿದೆ ಚಾಮುಂಡಿಯ ಪಾವನ ಚರಣ | ಗಗನವದು ಎತ್ತಿಹಳು ಓಕುಳಿಯ ಆರತಿ |  ಹಾಡುತಿದೆ ಹಕ್ಕಿಗಳು ಮಾತಾಯಿಯ ಕೀರುತಿ || ಎದ್ದೇಳು ಎದ್ದೇಳು ಚಾಮುಂಡಿ ತಾಯೆ, ಎದ್ದೇಳು ನಮ್ಮಮ್ಮ ಸಿರಿ ಗೌರಿ||

ಸುಪ್ರಭಾತ ಎನ್ನುತ್ತಿದೆ ಬೀಸುವ ತಂಗಾಳಿ | ಸುಪ್ರಭಾತ ಕೋರುತಿದೆ ಮಂಜಿನ ಬಿಂದು | ನಾದಸ್ವರ ಆಲೆಗಳಲಿ ಉದಯದ ಸಂದೇಶ | ಬೆಳಗಾಯಿತು ಎನ್ನುತ್ತಿದೆ ವೇದದ ಘೋಷ ||ಎದ್ದೇಳು ……

ರುದ್ರ ರೂಪ ಕಳೆದು ಶಾಂತ ರೂಪ ತಾಳಿದೆ | ಭಕ್ತರಿಗೆ ಮುಕ್ತಿ ನೀಡೋ ದಿವ್ಯಶಕ್ತಿ ಮೂಡಿದೆ | ಪಶ್ಚಾತ್ತಾಪ ಕಂಬನಿಯಲಿ ಅಭಿಷೇಕ ಮಾಡಿದೆ | ಪಾಪಗಳ ಮನ್ನಿಸಿ ಪೊರೆ ಎನ್ನುತ ಬೇಡುವೆ ||ಎದ್ದೇಳು ……

ಮಹಿಷನನು ನೀ ಕೊಂದು ದಣಿವು ಆಯಿತೆ | ರಕ್ತಬೀಜ ಸಂಹಾರದಿ ಕರವು ಸೋತಿತೆ | ಬ್ರಹ್ಮಾದಿ ಮೂವರರ ಅಂಶವು ನೀನಮ್ಮ | ಕರುಣೆಯಲಿ ನೀನೊಮ್ಮೆ  ನಮ್ಮ ನು ನೋಡಮ್ಮ ||ಎದ್ದೇಳು ……

Lyrics in English

Udayiside moodanadi chinnada kirana | holeyutide chaamundiya paavana charana | gaganavadu ettihalu okuliya aarati | haadutide hakkigalu maataayiya keeruti ||eddelu eddelu chamundi taaye, eddelu nammamma siri howri ||

Suprabhata ennutide beesuva tangaali | suprabhaata korutide manjina bindu| naadaswaraaligalali udayada sandesha| belagaayitu ennutide vedada ghosha||eddelu……

Rudra roopa kaledu shaanta roopa taalide| bhaktarige mukti needo divyashakti moodide | pashchaatapa kambaniyali abhisheka maadide| paapagala mannisi pore ennuta beduve||eddelu ……

Mahishananu nee kondu danivu aayite| raktabeeja samhaaradi karavu sotite| brahmaadi moovakrara amshavu neenamma| karuneyali neenomme nammanu nodamma||eddelu …..


3rd song in the album

Leave a Reply