
ಉಬ್ಬದಿರು ಉಬ್ಬದಿರು ಎಲೆ ಮಾನವಾ…|
ಹೆಬ್ಬುಲಿಯಂತೆ ಯಮನು ಬೊಬ್ಬಿಡುತ ಕಾದಿರುವ
||ಉಬ್ಬದಿರು||
ಸಾಗರದ ತೆರೆಯಂತೆ ಸಾವು ಹುಟ್ಟಿರಲಾಗಿ
ಭೋಗಭಾಗ್ಯಗಳೆಂದು ಬಳಲಲೇಕೋ|
ನಾಗಪೆಡೆ ನೆರಳಲ್ಲಿ ನಡುಗೋ ಕಪ್ಪೆಯ ರೀತಿ|
ಕೂಗಿ ಚೀರಿದರೆ ನಿನ್ನಾಗ ಕೇಳುವರೇ….
||ಉಬ್ಬದಿರು||
ಮಾಳಿಗೆ ಮನೆ ಎಂದು ಮತ್ತೆ ಸತಿಸುತರೆಂದು
ಜಾಳಿಗೆ ಧನ,ಧಾನ್ಯ ಪಶುಗಳೆಂದು|
ವೇಳೆ ತಪ್ಪದೆ ತಿಂಬ ಕೂಳು ತನಗುಂಟೆಂದು|
ಗಾಳಿಗಿಕ್ಕಿದ ದೀಪ ಬಾಳು ಬದುಕೆಲ್ಲಾ…
||ಉಬ್ಬದಿರು||
ಅಸ್ಥಿರದ ಭವದೊಳಗೆ ,ಅತಿಶಯಗಳೆನಿಸದಲೆ
ವಸ್ತು ಇದರಲಿ ಕೇಳು,ವೈರಾಗ್ಯವಾ…|
ವಿಸ್ತಾರ ಮಹಿಮಶ್ರೀ ಪುರಂದರವಿಠ್ಠಲನಾ|
ಸ್ವಸ್ತ ಚಿತ್ತದಿ ನೆನೆದು,ಮುಕ್ತಿ ಪಡೆ ಮನುಜಾ…
||ಉಬ್ಬದಿರು||
Lyrics in English
Ubbadiru ubbadiru ele maanavaa ….. | hebbuliyante yamanu bobbiduta kadiruva || ubbadiru ||
Sagarada tereyante saavu huttiralaagi | bhogabhagyagalendu balalaleko | nagapade neralalli nadugo kappeya reeti | koogi cheeridare ninnaaaga keluvare ….. || ubbadiru ||
Maalige mane endu matte satisutarendu | jaalige dhana dhaanya pashugalendu | vele tappade timba koolu tanaguntendu | gaaligikkida deepa baalu badukella …. || ubbadiru ||
Astirada bhavadolage atishayagalenisadale | vastu idarali kelu, vairagyavaa ….. | vistaara mahima sri purandara vittalanaa | swasta chittadai nenedu mukti pade manuja …. || ubbadiru ||