ಉಯ್ಯಾಲೆ ತೂಗಿರಮ್ಮ ಶ್ರೀಗುರುರಾಯರ / Uyyale toogiramma sri gururayara

ಉಯ್ಯಾಲೆ ತೂಗಿರಮ್ಮ
ಶ್ರೀಗುರುರಾಯರ ಉಯ್ಯಾಲೆ ತೂಗಿರಮ್ಮ|
ತಂಪಾದ ವೇಳೆಯಲಿ ಇಂಪಾಗಿ ಹಾಡುತಲಿ
ವೈಯಾರದಿ ತೂಗಿರಿ ಜೋ ಜೋ ಲಾಲಿ ||ಉಯ್ಯಾಲೆ||

ಚಂದನ ಹಚ್ಚಿ ಚೆಂದಾಗಿ ಸೇವೆ ಮಾಡುತ
ಇಂದು ತೂಗಿರಿ ಶ್ರೀ ಯೋಗಿರಾಜನ |
ತಂಗಾಳಿ ಬೀಸಿರಿ ಬೆಳ್ಳಿಚಾಮರದಲ್ಲಿ|
ಸುದಾಭಾಷ ಬರೆದ ಪರಮ ಮುನೀಂದ್ರನ ||ಉಯ್ಯಾಲೆ||

ಕರ್ಪೂರದ ಆರತಿಯ ಎತ್ತಿ ಬನ್ನಿ ಎಲ್ಲ
ಕಲಿಯುಗದ ಕಾಮಧೇನು ಕರುಣಾಮಯಗೆ |
ತುಳಸಿಮಾಲೆ ಅರ್ಪಿಸಿ ತೂಗಿರಿ ನೀವು|
ತುಂಗಭದ್ರ ತೀರದಲ್ಲಿ ನೆಲೆಸಿಹ ಸ್ವಾಮಿಯ
||ಉಯ್ಯಾಲೆ||

ಸುಧೀಂದ್ರ ಯತಿಗಳ ಕರಸಂಜಾತನಂತೆ
ಮೂಲರಾಮನ ಪೂಜೆಗೈದವನಂತೆ
ಪರಮ ವೈನಿಕವೀಣಾ ಕೋವಿದನಂತೆ|
ಭಕ್ತಿಯಿಂದಲಿ ಸೇವೆ ಮಾಡಿರಿ ತೂಗಿ
||ಉಯ್ಯಾಲೆ||

Lyrics in English

Uyyale toogiramma
sri gururayara uyyaale toogiramma |
tampada veleyali impaagi hadutali |
vaiyaradi toogiri jo jo lali || uyyale ||


Chandana hacchi chendagi seve maduta
indu toogiri sri yogirajana |
tangali bisire belli chamaradali
sudhabhasha bareda parama munindrana || uyyale ||


Karpoorada aratiya etti banni ella
kaliyugada kamadhenu karunamayage |
tulasimale arpisi toogiri neevu
tungabhadra teeradalli nelesiha swamiya ||Uyyale ||

Sudheendra yatigala karasanjatanante
moolaramana poojegaidavanante |
parama vainika veena kovidanante
bhaktiyindali seve madiri toogi || uyyale ||


Leave a Reply