
ಋಣವೆಂಬ ಸೂತಕವು ಬಹು ಭಾಧೆ ಪಡಿಸುತಿದೆ
ಗುಣನಿಧಿಯೆ ನೀ ಯೆನ್ನಾ
ಋಣವ ಪರಿಹರಿಸೋ. ..||ಋಣ||
ಕೊಟ್ಟವರು ಬಂದೆನ್ನ ನಿಷ್ಠುರಂಗಳನಾಡಿ
ಕೆಟ್ಟ ಬೈಗಳ ಬೈದು ಮನದಣಿಯಲು
ದಿಟ್ಟತನವನು ಬಿಟ್ಟು ಕಳೆಗುಂದಿದೆನಯ್ಯ
ಸ್ರಷ್ಠಿಗೊಡೆಯನೆ ಎನ್ನ ಋಣವ ಪರಿಹರಿಸೋ
||ಋಣವೆಂಬ||
ಹೆತ್ತ ಸೂತಕ ಹತ್ತು ದಿನಗಳಿಗೆ ಪರಿಹಾರ
ಮ್ರತ್ಯು ಸೂತಕವು ಹನ್ನೊಂದು ದಿನಕೇ
ಮತ್ತೆಲ್ಲಾ ಸೂತಕವು ಜನ್ಮ ಜನ್ಮಾಂತರಕೆ
ಎತ್ತ ಹೋದರು ಬಿಡದೆ ಬೆನ್ನತ್ತಿ ಬಹುದೂ
||ಋಣವೆಂಬ||
ಬಂಧುಬಳಗದ ಮುಂದೆ ಬಹುಮಾನವು ಪೋಗಿ
ನೊಂದು ಬಳಿದೆನೊ, ಈವಿಧ ಋಣದೊಳು
ಇಂದಿರಾರಮಣ ಶ್ರೀಪುರಂದರವಿಠ್ಠಲನೆ
ಇಂದೆನ್ನ ಋಣವ ಪರಿಹರಿಸಯ್ಯ ದೊರೆಯೇ
||ಋಣವೆಂಬ||
Lyrics in English
Runavemba sootakavu bahu bhade padisutide
gunanidhiye nee yenna
runava parihariso || Runavemba||
Kottavaru bandenna nishturangalanadi
ketta baigula baidu manadaniyalu |
dittatanavanu bittu kalegundidenayya
srushtigodeyane enna runava parihariso ||
Hetta sootaka hattu dinagalige parihara
mrutyu sootakavu hannondu dinake |
mattella sootakavu janma janmantarake
etta hodaru bidade bennatti bahudo ||
Bandhubalagada munde bahumanavu pogi
nondu balalideno, ee vidha runadolo |
indiraramana sree purandara vittalane
indenna runava pariharisayya doreye ||