
ರಚನೆ : ಶ್ಯಾಮಸುಂದರ ದಾಸರು
ಎಂದು ಕಾಂಬೆನೋ ನಂದಗೋಪನ ಕಂದ ಶ್ರೀ ಗೋವಿಂದನ|
ಮಂದರಾಚಲ ಧರನೆ ಯದುಕುಲ ಚಂದ್ರ ಗುಣಗುಣ ಸಾಂದ್ರನಾ||
ವಿಜಯಸೂತನ ವಿಶ್ವಪಾಲನ ಭುಜಗವರ ಪರ್ಯಂಕನ |
ರಜನಿ ಚರರಳಿದ ಜನಕನ ತ್ರಿಜಗಪತಿ ದ್ವಿಜಗಮನನಾ ||೧||
ಪಾಲದಧಿ ನವನೀತ ಚೋರನ ಬಾಲಕೃಷ್ಣ ಗೋಪಾಲನ |
ಶೈಲ ಬೆರಳಲಿ ತಾಳಿ ಗೋಕುಲ ಪಾಲಿಸಿದ ಪರಮಾತ್ಮನ ||೨||
ಭಾಮೆ ರುಕ್ಮಿಣಿ ರಮಣ ರಂಗನ ಸಾಮಗಾನ ವಿಲೋಲನ |
ಶ್ರೀ ಮದಾನಂದ ಮುನಿ ಕರಾರ್ಚಿತ ಶ್ಯಾಮಸುಂದರ ವಿಠ್ಠಲನ ||೩||
Lyrics in English
Composer : Shyamasundara dasaru
Endu kambeno nandagopala kanda sri govindana |
mandarachaladharane yadukula chandra gunaguna sandranaa ||
Vijayasutana vishwapalana bhujagavara paryankana |
rajani chararalida janakana trijagapati dwijagamananaa ||1||
Paladadhi navanita chorana balakrishna gopalana |
shaila beralali tali gokula palisida paramatmana ||2||
Bhame rukmini ramana rangana samagana vilolana |
sri madananda muni kararchita shyamasundara vittalana ||3||
*****************