
ಏನು ಕರುಣಾ ಹೃದಯನೂ ಏಕದಂತನೇ
ಸಾಟಿ ಇಲ್ಲವು ನಿನ್ನ ಪ್ರೀತಿಗೆ ಲಂಬೋದರನೇ ||ಏನು||
ಪುಟ್ಟ ಇಲಿಯನು ನಿನ್ನ ವಾಹನ ಮಾಡಿಕೊಂಡೆ ಬೆನಕನೇ
ಅದರ ಮೇಲೆ ನಿನ್ನ ಕರುಣೆ ಮಳೆಯ ಕರೆದೆ ಗಣಪನೆ ||ಅದರ ಮೇಲೆ||
ಒಂದು ಹುಲ್ಲು ಗರಿಕೆ ನಿನಗೆ ಅರ್ಪಿಸಿದರೆ ಸಾಕು ||ಒಂದು||
ಮಂಜಿನಂತೆ ಕಷ್ಟ ಕರಗಿ ಬಾಳು ಬೆಳಗಲೆ ಬೇಕು ||2|| ||ಏನು||
ತಂದೆ ತಾಯಲಿ ಮೂರು ಲೋಕವ ಕಂಡ ಪರಮ ಜ್ಞಾನಿಯೇ ||ತಂದೆ||
ಜ್ಞಾನ ಫಲವನು ಪಡೆದ ಬಾಲನೇ ಜ್ಞಾನವಾರಿದಿಯೆ ||ಜ್ಞಾನ||
ಕಡಲೆ ಬೆಲ್ಲವ ಅರ್ಪಿಸಿದರು ತೃಪ್ತಿ ಅದರಲೆ ಪಡುವೆ ನೀ ||ಕಡಲೆ||
ಮಂತ್ರ ತಂತ್ರವ ಅರಿಯದಿದ್ದರೂ ಶುದ್ಧ ಮನಸಿಗೆ ಒಲಿವೆ ನೀ ||ಏನು||
ಬಾಳು ಎನುವ ನೌಕೆಗೆ ನೀನೇ ಎಂದು ಅಂಬಿಗ ||ಬಾಳು||
ಯಾವುದೇ ಬಿರುಗಾಳಿ ಬಂದರು ತೀರ ಸೇರಿಸೋ ನಾವಿಕ ||ಯಾವುದೇ||
ತುಂಬಿದೆ ಈ ನನ್ನ ಮನದೆ ಅಜ್ಞಾನದ ಕತ್ತಲೆ ||ತುಂಬಿದೆ||
ಜ್ಞಾನ ಜ್ಯೋತಿ ಬೆಳಗಿ ದಾರಿ ತೋರಿಸೋ ವಿನಾಯಕ ||ಏನು||
Lyrics in English
Enu karuna hrudaayano ekadantane
saati illavu ninna preetige lambodarane ||
Putta iliyanu ninna vahana madikonde benakane
adara mele ninna karune maleya karede ganapane ||
ondu hullu garike ninage arpisidare saaku |
manjinante kashta karagi balu belagale beku ||
Tande tayali mooru lokava Kanda parama jnaniye |
jnana phalavanu padeda balane jnanavaridhiye ||
kadale bellava arpisidaru trupti adarale paduve nee |
mantra tantrava ariyadiddaru shuddha manasige olive nee ||
Baalu enuva noukege neene endu ambiga |
yavude birugali bandaru teera seriso navika ||
tumbide ee nanna manade ajnanada kattale |
jnana Jyoti belagi daari toriso Vinayaka ||