ಕಂಡೆ ಕರುಣಾನಿಧಿಯ ಗಂಗೆಯ /Kande karunanidhiya gangeya

ಕಂಡೆ ಕರುಣಾನಿಧಿಯ ಗಂಗೆಯ ಮಂಡೆಯೊಳಿಟ್ಟ ದೊರೆಯ ಶಿವನ ||ಪ||

ರುಂಡಮಾಲೆ ಸಿರಿಯ ನೊಸಲೊಳು ಕೆಂಡಗಣ್ಣಿನ ಬಗೆಯ ಹರನ ||ಅ.ಪ||

ಕಪ್ಪುಗೊರಳ ಹರನ ಕಂದರ್ಪ ಪಿತನ ಸಖನ
ಮುಪ್ಪುರ ಗೆಲಿದವನ ಮುನಿನುತ ಸರ್ಪಭೂಷಣ ಶಿವನ ಹರನ  ||೧||

ಭಸಿತ ಭೂಷಿತ ಶಿವನ ಭಕ್ತರ ವಶದೊಳಗಿರುತಿಹನ
ಪಶುಪತಿಯೆನಿಸುವನ ವಸುಧೆಯೊಳು ಶಶಿಶೇಖರ ಶಿವನ ಹರನ ||೨||

ಗಜ ಚರ್ಮಾಂಬರನ ಗೌರೀವರ ತ್ರಿಜಗದೀಶ್ವರನ
ತ್ರಿಜಗನ್ಮೋಹನನ ತ್ರಿಲೋಚನ ತ್ರಿಪುರಾಂತಕ ಶಿವನ ಹರನ   ||೩||

ಕಾಮಿತ ಫಲವೀವನ ಭಕ್ತರ ಪ್ರೇಮದಿ ಸಲಹುವನ
ರಾಮನಾಮಸ್ಮರನ ರತಿಪತಿ ಕಾಮನ ಸಂಹರನ ಶಿವನ            ||೪||

ಧರೆಗೆ ದಕ್ಷಿಣಕಾಶಿ ಎನಿಸುವ ಪುರ ಪಂಪಾವಾಸಿ
ತಾರಕ ಉಪದೇಶಿ ಪುರಂದರವಿಠಲ ಭಕ್ತರ ಪೋಷಿ                  ||೫||

Lyrics in English

Kande karunanidhiya gangeya mandeyolitta dhoreya ||pa||

Rundamaleya siriya nosalolu kenda gannina bageya ||a.pa||

Kappukorala harana kandarpa pitana sakhana |
muppura gelidavana muninuta sarpabushanana shivana harana | 1 |

Basita bushita harana bhaktara vashadolagirutihana |
pashupatiyenisuvana vasudheli shashishekara shivana harana | 2 |

Gaja charmanbharana gauri vara jagadishvarana |
trijaganmohanana dakshadhvarayajna kedisidana shivana harana | 3 |

Kamita palavivana bakutara premadi salahuvana |
rama nama smarana ratipati kamana sanharana shivana | 4 |

Dharege dakshina kashi enisuva panpapura vasi |
taraka upadesi purandara vithalana bhaktara poshi harana | 5 |

Leave a Reply