
ರಚನೆ : ಪುರಂದರದಾಸರು
ಕರುಣಿಸೋ ರಂಗ ಕರುಣಿಸೋ
ಕೃಷ್ಣ ಕರುಣಿಸೋ ರಂಗ ಕರುಣಿಸೋ|
ಹಗಲು ಇರುಳು ನಿನ್ನ ಸ್ಮರಣೆ ಮರೆಯದಂತೆ ||ಪ||
ರುಕುಮಾಂಗದನಂತೆ ವ್ರತವ ನಾನರಿಯೆ |
ಶುಕಮುನಿಯಂತೆ ಸ್ತುತಿಸಲು ಅರಿಯೆ |
ಬಕವೈರಿಯಂತೆ ಧ್ಯಾನವ ಮಾಡಲರಿಯೇ|
ದೇವಕಿಯಂತೆ ಮುದ್ದಿಸಲೂ ಅರಿಯೆನೋ ||೧||
ಗರುಡನಂದದಿ ಪೊತ್ತು ತಿರುಗಲು ಅರಿಯೆ |
ಕರಿಯಲು ಅರಿಯೆ ಕರಿರಾಜ ನಂತೆ |
ವರಕಪಿಯಂತೆ ದಾಸ್ಯವ ಮಾಡಲರಿಯೇ |
ಸಿರಿಯಂತೆ ನೆರೆದು ಮೋಹಿಸಲು ಅರಿಯೆನೋ ||೨||
ಬಲಿಯಂತೆ ದಾನವ ಕೊಡಲು ಅರಿಯೆ |
ಭಕ್ತಿ ಛಲವನು ಅರಿಯೇ ಪ್ರಹ್ಲಾದನಂತೆ |
ವರಿಸಲು ಅರಿಯೆ ಅರ್ಜುನನಂತೆ ಸಖನಾಗಿ |
ಸಲಹೋ ದೇವರ ದೇವ ಶ್ರೀ ಪುರಂದರವಿಠ್ಠಲ ||೩||
Lyrics in English
Karuniso ranga karuniso krishna
Karuniso ranga karuniso
Hagalu irulu ninna samrane Mareyadanthe || Karuniso ||
Rukmangadanante vrathava nanariye
Shuka muniyanthe struthisalu ariye
Bakavairiyenthe dhyanava maadalariye
Devakiyanthe muddisaloo ariye krishna || Karuniso ||
Garudanandadi pottu thirugalu ariye
Kariyalu ariye kari raajanante
Vara kapiyanthe daasyava maadalariye
Siriyante neredu mohisalu ariye krishna || Karuniso ||
Baliyante daanava kodalu ariye
Bhakthi cheluvanariye prahalladanante
Varisalu ariye arjunanante sakhanaagi
Salaho devara deva salaho devara deva
Purandara vittala sri purandara vittala || Karuniso ||
——————————