
ರಚನೆ : ಪುರಂದರದಾಸರು
ಕಲ್ಯಾಣಂ ತುಳಸಿ ಕಲ್ಯಾಣಂ ||ಪ||
ಕಲ್ಯಾಣವೇ ನಮ್ಮ ಕೃಷ್ಣ ಶ್ರೀತುಳಸಿಗೆ
ಬಲ್ಲಿದ ಶ್ರೀ ವಾಸುದೇವನಿಗೆ ||ಅ.ಪ||
ಅಂಗಳದೊಳಗೆಲ್ಲ ತುಳಸಿಯ ವನಮಾಡಿ
ಶೃಂಗಾರವ ಮಾಡಿ ಶೀಘ್ರದಿಂದ
ಕಂಗಳ ಪಾಪವ ಪರಿಹರಿಸುವ ಮುದ್ದು
ರಂಗ ಬಂದಲ್ಲಿ ತಾ ನೆಲೆಸಿದನು ||೧||
ಮಿಂದು ಮಡಿಯನುಟ್ಟು ಸಂದೇಹವ ಬಿಟ್ಟು
ತಂದ ಶ್ರೀಗಂಧಾಕ್ಷತೆಗಳಿಂದ ಸಿಂಧುಶಯನನ
ವೃಂದಾವನದಿ ಪೂಜಿಸೆ
ಕುಂದದ ಭಾಗ್ಯವ ಕೊಡುತಿಹಳು ||೨||
ಭಕ್ಷ್ಯ ಭೋಜ್ಯಂಗಳ ನೈವೇದ್ಯವನಿತ್ತು
ಲಕ್ಷ ಬತ್ತಿಯ ದೀಪವ ಹಚ್ಚಿ ಅಧೋಕ್ಷಜ
ಸಹಿತ ವೃಂದಾವನ ಪೂಜಿಸೆ
ಸಾಕ್ಷಾತ್ ಮೋಕ್ಷವ ಕೊಡುತಿಹಳು||೩||
ಉತ್ಥಾನ ದ್ವಾದಶಿ ದಿವಸದಿಂದಲಿ
ಕೃಷ್ಣಉತ್ತಮ ತುಳಸಿಗೆ ವಿವಾಹವ
ಚಿತ್ತನಿರ್ಮಲರಾಗಿ ಮಾಡಿದವರಿಗೆ
ಉತ್ತಮ ಗತಿ ಈವ ಪುರಂದರವಿಠಲ ||
Lyrics in English
Kalyanam tulasi kalyanam ||pa||
kalyanave namma krishna shri tulasige ballida shri vasudevanige
Angaladolagella tulasiya vana madi shrngarava madi shigradinda
kangala papava pariharisuva muddu ranga bandalli ta nelisidanu ||1||
Mindu madiyanuttu sandehava bittu tanda shri gandhakshategalinda
sindhu shayanana vrndavanadi pujise kundada bhagyava kodutihalu ||2||
Bhakshya bhojyangala naivedyavanittu laksha battiya dipava hachi
adhokshaja sahita vrndavana pujise sakshat mokshava kodutihalu ||3||
Uddhana dvadashi divasadindali krishna uttama tulasige vivaha
chitta nirmalaragi madidavarige uttama gati iva purandara vittala||4||
———————————————–