ಕಾಯೋ ಶ್ರೀ ನಾರಸಿಂಹ ಕಾಯೋ / kayo sri naarasimha kaayo

ಕಾಯೋ ಶ್ರೀ ನಾರಸಿಂಹ ಕಾಯೋ ಜಯ ನಾರಸಿಂಹ ।ಪ।

ಕಾಯೋ ಶ್ರೀ ನಾರಸಿಂಹ ತ್ರಿಯಂಬಕಾದ್ಯಮರೇಶ
ಭಯಾಂಧತಿಮಿರ ಮಾರ್ತಾಂಡ ಶ್ರೀನಾರಸಿಂಹ ।ಅ ಪ।

ಘೋರ ಅಕಾಲಮೃತ್ಯು ಮೀರಿ ಬರಲು ಕಂಡು
ಧೀರ ನೀ ಬಿಡಿಸದಿನ್ಯಾರೋ ಶ್ರೀ ನಾರಸಿಂಹ ।।೧।।

ಧೀಷಣನೆ ಸುಭದ್ರ ದೋಷ ಮೃತ್ಯುಗೆ ಮೃತ್ಯು
ಸುಷಮ್ನಾನಾಡಿ ಸ್ಥಿತವಿಭುವೆ ಶ್ರೀನಾರಸಿಂಹ ।।೨।।

ಜ್ಞಾನರಹಿತನಾಗಿ ನಾ ನಿನ್ನ ಮರೆತರೆ
ನೀನೂ ಮರೆತದ್ಯಾಕೆ ಪೇಳೋ ಶ್ರೀ ನಾರಸಿಂಹ ।।೩।।

ಪ್ರಬಲೋತ್ತಮನೆನಿಸಿ ಅಬಲರ ಕಾಯದಿರೆ
ಸುಬಲರು ಕಂಡು ಮೆಚ್ಚುವರೆ ಶ್ರೀ ನಾರಸಿಂಹ ।।೪।।

ಪಾಲಮುನ್ನೀರಾಗರ ಪದುಮಮನೋಹರ
ಗೋಪಾಲ ವಿಠಲ ಜಗತ್ಪಾಲ ಶ್ರೀ ನಾರಸಿಂಹ ।।೫।।


Lyrics in English

Kayo sri naarasimha jaya naarasimha ||pa||

Kayo sri naarasimha triyambakadyamaresha
bhayaandhatimira martanda SrI naarasimha ||a.pa||

Ghora akalamrutyu meeri barali kandu
dheera nee bidisadinyaro SrI naarasimha ||1||

Dhishanane subhadra dosha mrutyuge mrutyu
sushumnanadi stitavibhuve SrI naarasimha ||2||

Jnanarahitanagi naa Ninna maretare
neenu maretadyake pelo SrI naarasimha ||3||

Prabalottamanenisi abalara kayadire
subalaru kandu mecchuvare SrI naarasimha ||4||

Paalamunneeragara paduma manohara
gopala vittala jagatpala SrI naarasimha ||5||


Leave a Reply