ಕೂಗಿದರು ಧ್ವನಿ ಕೇಳದೆ ಶಿರಬಾಗಿದರು / Koogidaru dhwani kelade Shira bagidaru

ಕೂಗಿದರು ಧ್ವನಿ ಕೇಳದೆ
ಶಿರಬಾಗಿದರು ದಯ ಬಾರದೆ  ||ಕೂಗಿದರು||
ಭೋಗಿಶಯನ ಭುವನಾಧಿಪತೇ ||2||
ನಿನ್ನ ಆಗಮನವೆಂದಿಗೇ..ಏ..
ಆಗುವುದೋ ಪ್ರಭೂ   ||ಕೂಗಿದರು||

ಸಿಂಧುಶಯನ ಶೇಷಾದ್ರಿವರ
ಸಿರಿಮಂದಿರ ಭಕ್ತ ಕುಟುಂಬಧರಾ ||
ಸುಂದರಮೂರುತಿ ಒಂದಿನ ಸ್ವಪ್ನದಿ ||2||
ಬಂದು ಪದದ್ವಯ ಚೆಂದದಿ ತೋರಿಸೊ ||ಕೂಗಿದರು||

ಕರುಣಾಶರಧಿಯು ನೀನಲ್ಲವೆ
ಕ್ರಷ್ಣಾ ಶರಣಾಗತರಿಗೆ ದೊರೆಯಲ್ಲವೆ ||
ಮೊರೆಹೊಕ್ಕವರಿಗೆ ಮರೆಯಾಗುವರೆ ||2||
ಸರಿಯೇ ಜಗದೊಳು
ವಿಜಯವಿಠ್ಠಲರೇಯ||ಸರಿಯೇ||   ||ಕೂಗಿದರು||

Lyrics in English

Koogidaru dhwani kelade
Shira bagidaru Daya barade ||
bhogishayana bhuvanadhipati ||2||
Ninna aagamanavendige a …. a ….
aguvudo prabhu ||

Sindhushayana sheshadrivara
sirimandira bhaktakutumbhadhara
sundaramuruti indina swapnadi ||2||
bandu padadwaya chendadi torise ||

Karunasharadhiyu neenallave
Krishna sharanagatarige doreyallave ||
more hokkavarige mareyaguvare ||2||
sariye jagadolu
vijaya vittalareya ||

Leave a Reply