
ಕೇಶವನೊಲುಮೆಯು ಆಗುವ ತನಕ
ಹರಿದಾಸರೊಳಿರುತಿರು ಹೇ ಮನುಜ ||ಕೇಶವ||
ಕ್ಲೇಶಪಾಶಂಗಳ ಹರಿದು ವಿಲಾಸದಿ
ಶ್ರೀಶನ ನುತಿಗಳ ಪೋಗಳುತ ಮನದೊಳು ||ಕೇಶವ||
ಮೋಸದಿ ಜೀವರ ಘಾಸಿ ಮಾಡಿದ ಪಾಪ
ಕಾಶಿಗೆ ಹೋದರೆ ಹೋದೀತೆ
ಶ್ರೀಶನ ಭಕುತರ ದೂಷಿಸಿದ ಫಲ
ಕಾಸು ಕೊಟ್ಟರೆ ಬಿಟ್ಟೀತೆ
ಭಾಷೆಯ ಕೊಟ್ಟು ನಿರಾಶೆಯ ಗೈದ ಫಲ
ಕ್ಲೇಶವ ಗೊಳಿಸದೆ ಇದ್ದೀತೆ
ಭೂಸುರಸರ್ವಸ್ವವ ಹ್ರಾಸ ಮಾಡಿದ ಫಲ
ಏಸೇಸು ಜನುಮಕು ಬಿಟ್ಟೀತೆ ||ಕೇಶವ||
ಹೀನನ ವಶದೊಳು ನಾನಾ ದ್ರವ್ಯವಿರೆ
ದಾನ ಧರ್ಮಕೆ ಮನಸಾದೀತೆ
ಹೀನ ಮನುಜನಿಗೆ ಜ್ಞಾನವ ಭೋಧಿಸೆ
ಹೀನ ವಿಷಯ ಅಳಿದ್ಹೋದೀತೆ
ಮಾನಿನಿ ಮನಸು ನಿಧಾನವಿರದಿರೆ
ಮಾನಾಭಿಮಾನಗಳು ಉಳಿದೀತೇ
ಭಾನುಪ್ರಕಾಶನ ಭಜನೆಯ ಮಾಡದ
ಹೀನಗೆ ಮುಕುತಿಯು ದೊರಕೀತೆ || ಕೇಶವ ||
ಕರುಣಾಮೃತದಾಭರಣವ ಧರಿಸಿದ
ಪರಮಗೆ ಸಿರಿಯು ತಪ್ಪೀತೆ
ಕರುಣ ಪಾಶದ ಉರವಣೆ ತೊರೆದಾತಗೆ
ಶರಣರ ಕರುಣವು ತಪ್ಪೀತೆ
ಅರಿತು ಶಾಸ್ತ್ರವನಾಚರಿಪ ಯೋಗ್ಯಗೆ
ಗುರು ಉಪದೇಶವು ತಪ್ಪೀತೆ
ವರ ವೇಲಾಪುರದಾದಿಕೇಶವನ
ಸ್ಮರಿಸುವವನಿಗೆ ಮೋಕ್ಷ ತಪ್ಪೀತೆ ||ಕೇಶವ||
Lyrics in English
Keshavanolumeyu aguva tanaka
haridasarolirutiru he manuja ||
kleshapashangala haridu vilasadi
sreeshana nutigala pogaluta manadolu ||
Mosadi jeevara ghasi madida paapa
kashige hodare hodite |
sreeshana bhakutara dooshisida phala
kaaau kottare bitteete |
bhasheya kottu nirasheya gaida phala
kleshava golisade iddite |
bhusurasarvaswava hrasa madida phala
esesu janumaku bitteete || keshava ||
Heenana vashadolu naama dravyavire
damana dharmake manasadite |
heena manujanige jnanava bhodise
heena vishaya alidohdite |
mamimi manasu nidhanaviradire
manabhimanagalu ulidite |
bhanuprakashana bhajaneya madada
heenage mukutiya dorakitu || keshava ||
Karunamrutadabharanava dharisida
paramagnetic siriyu tappite |
Karuna pashada uravane toredatage
sharanara karunavu tappite |
aritu shastravanacharipa yogyage
guru upadeshavu tappite |
varada velapuradadikeshavana
smarisuvavanige moksha tappite || keshava ||