
ಗಜಮುಖ ವಂದಿಸುವೆ ಕರುಣಿಸಿ ಕಾಯೊ||
ಗಜಮುಖ ವಂದಿಪೆ ಗಜಗೌರಿಯ ಪುತ್ರ ಅಜನ ಪಿತನ ಮೊಮ್ಮಗನ ಮೋಹದ ಬಾಲ ||a.pa||
ನೀಲಕಂಠನ ಸುತ ಬಾಲಗಣೇಶನೆ ಬಾರಿ ಬಾರಿಗೆ ನಿನ್ನ ಭಜನೆ ಮಾಡುವೆನಯ್ಯ
ಪರುವತನ ಪುತ್ರಿ ಪಾರ್ವತಿಯ ಕುಮಾರ ಗರುವಿಯಾ ಚಂದ್ರಗೆ ಸ್ಥಿರಶಾಪ ಕೊಟ್ಟನೆ ||
ಮತಿಗೆಟ್ಟ ರಾವಣ ಪೂಜಿಸದೆ ಸೀತಾಪತಿ ಕರದಿಂದಲಿ ಹತವಾಗಿ ಪೋದನು
ವಾರಿಜನಾಭ ಶ್ರೀ ಹಯವದನನ ಪದ ಸೇರುವ ಮಾರ್ಗದ ದಾರಿಯ ತೋರಿಸೊ||
Lyrics in English
Gajamukha vandisuve karunisi kayo ||
Gajamukha vandipe gajagowriya putra |
Ajana pithana mommagana mohada baala | |
Neelakanthana sutha baala ganeshane
Baari baarigu ninna smarane maaduvenayya |
Parvathanaa putri paarvathiya kumara
Garuviya chandrage smira shaapa kottane | |
Mathigetta raavana poojisade
Seethapathi karadindali hathanaagi hodanu |
Vaarijanaabha sree hayavadanana paada
Seruva maargada daariya thoriso | |