ಚಾಮುಂಡಿ ವರದಾಯಿನಿ / Chamundi varadaayini kaapadu

ಚಾಮುಂಡಿ ವರದಾಯಿನಿ ಕಾಪಾಡು ಕಾತ್ಯಾಯನಿ | ನೀನಿರಲು ಭಯವಿಲ್ಲ ಭವವೆಂಬ ಇರುಳಿಲ್ಲ, ನೀನಿಲ್ಲದೇ ಅನ್ಯ ದೈವ ಎನಗಿಲ್ಲ, ನೀನಿಲ್ಲದೇ ತಾಯಿ ನಾನೆಂಬುದಿಲ್ಲ ||ಪ||

ಶ್ರದ್ದೆ ಎನ್ನುವಾ ಪುಷ್ಪದಿ ಪೂಜಿಸಿ, ನಂಬಿಕೆ ಎನ್ನುವ ದೀಪವ ಬೆಳಗಿ | ಭಕ್ತಿ ಎನ್ನುವ ಆರತಿ ಎತ್ತಿ, ಆತ್ಮ ನಿವೇದನೆ ನೀಡುವ ನಿನಗೆ ||

ಕಣ್ಣೀರಲಿ ನಿನ್ನ ಪಾದ ತೊಳೆವೆನು, ನನ್ನನೇ ನಿನಗೆ ಅರ್ಪಿಸುವೆನು | ಪಾಪದ ಹೊರೆ ಹೊತ್ತು ಬೆಂಡಾಗಿದೆ ಜೀವ |ಹೊರೆ ನೀಗಿ ನೆಲೆ ನೀಡಿ ಕಳೆ ನನ್ನ ನೋವ ||

ಒಡಲಲ್ಲಿ ಕಣಕಣವು ನಿನ್ನಯ ರೂಪ, ಕಣ್ಣಲ್ಲಿ ತುಂಬಿಹುದು ನಿನ್ನಯ ರೂಪ| ಕಿವಿಯಲ್ಲಿ ಮೊಳಗಿಹುದು ನಿನ್ನ ಕೀರ್ತಿ | ಬಾಳಲ್ಲಿ ಬೆಳಗಿಹುದು ನೀ ನನ್ನ ಸ್ಫೂರ್ತಿ ||

Lyrics in English

Chamundi varadaayini kaapadu kaatyayini | neeniralu bhayavilla bhavemba irulilla neenillade anya daiva enagilla, neenillade taayi naanembudilla ||pa||

Shradde ennuvaa pushpadi poojisi, nambike ennuva deepava belagi | bhakti ennuva arati etti, atma nivedane needuva ninage ||

Kanneerali ninna paada tolevenu, nannane ninage arpisuvenu | paapada hore hottu bendaagide jeeva | hore neegi nele needi kale nanna nova ||

Odalalli kanakanavu ninnaya roopa, kannalli tumbihudu ninnaya roopa |kiviyalli molagihudu ninna keerti | baalalli belagihudu nee nanna spoorti ||


https://youtu.be/n0jLgapUizk

Leave a Reply