ಚಿಂತ್ಯಾಕ ಮಾಡುತಿದ್ದಿ ಚಿನ್ಮಯನಿದ್ದಾನೆ / Chintyake maadutiddi chinmayaniddane

ಚಿಂತ್ಯಾಕ ಮಾಡುತಿದ್ದಿ ಚಿನ್ಮಯನಿದ್ದಾನೆ |
ಸ್ವಾಮಿ ಚಿನ್ಮಯನಿದ್ದಾನೆ |
ನಿನ್ನ ಚಿಂತೆಯ ಬಿಡಿಸುವ ಗೌರಿ ಕಾಂತನಿದ್ದಾನೆ ||

ಎಳ್ಳು ಕೊನೆಯು ಮುಳ್ಳುಮೊನೆಯು |
ಪೊಳ್ಳು ಬಿಡದೆ ಒಳಗೆ ಹೊರಗೆ |
ಎಲ್ಲ ಠಾವಿನಲ್ಲಿ ಗೌರಿ ವಲ್ಲಭನಿದ್ದಾನೆ || ೧ ||

ಹಿಂದೆ ನಿನ್ನ ಸಲಹಿದರ‍್ಯಾರೋ
ಮುಂದೆ ನಿನ್ನ ಸಲಹುವರ‍್ಯಾರೋ
ಅಂದಿಗೂ ಇಂದಿಗೂ ಎಂದಿಗೂ ನಂದಿ ವಾಹನನಿದ್ದಾನೆ  || ೨ ||

ನಾನು ನೀನು ಎಂಬುದು ಉಭಯ 
ಹೀನ ಗುಣಗಳೆಲ್ಲಾ ಕಳೆದು
ಜ್ಞಾನಿ ಚಿದಾನಂದ ಸುಖ ಸಂಪೂರ್ಣನಿದ್ದಾನೆ || ೩ ||

Lyrics in English

Chintyake maadutiddi chinmayaniddaane |
swami chinmayaniddaane |
ninna chinteya bidisuva gowri kaantaniddane ||

Ellu koneyu mullu moneyu |
pollu bidade olagehorage |
ella taavinalli gowri vallabhaniddane ||1||

Hinde ninna salahidaryaro |
munde ninna salahuvaryaro |2times
adindendendigoo nandi vaahaaniddane ||

Naanu neenu enba ubhaya
heena gunagalella kaledu
jnaani chidanand sukha sampoornaniddane ||

You can listen to the song here :

Leave a Reply