ಜಯ ಜಾನಕೀಕಾಂತ ಜಯ / Jaya janakikanta jaya

ಜಯ ಜಾನಕೀಕಾಂತ ಜಯ ಸಾಧುಜನ ವಿನುತ ||

ಜಯತು ಮಹಿಮಾನಂತ ಜಯ ಭಾಗ್ಯವಂತ ಜಯ ಜಯ ||

ದಶರಥನ ಮಗ ವೀರ ದಶಕಂಠ ಸಂಹಾರ
ಪಶುಪತೀಶ್ವರ ಮಿತ್ರ ಪಾವನ ಚರಿತ್ರ
ಕುಸುಮಬಾಣ ಸುರೂಪ ಕುಶಲಕೀರ್ತಿ ಕಲಾಪ
ಅಸಮ ಸಾಹಸ ಶಿಕ್ಷ ಅಂಬುಜದಳಾಕ್ಷ ||

ಸಾಮಗಾನಲೋಲ ಸಾಧುಜನ ಪರಿಪಾಲ
ಕಾಮಿತಾರ್ಥಪ್ರದಾತ ಕೀರ್ತಿ ಸಂಜಾತ
ಸೋಮಸೂರ್ಯಪ್ರಕಾಶ ಸಕಲ ಲೋಕಾಧೀಶ
ಶ್ರೀ ಮಹಾರಘುವೀರ ಸಿಂಧುಗಂಭೀರ ||

ಸಕಲ ಶಾಸ್ತ್ರವಿಚಾರ ಶರಣಜನ ಮಂದಾರ
ವಿಕಸಿತಾಂಬುಜವದನ ವಿಶ್ವಮಯಸದನ
ಸುಕೃತ ಮೋಕ್ಷಾಧೀಶ ಸಾಕೇತಪುರವಾಸ
ಭಕ್ತವತ್ಸಲ ರಾಮ ಪುರಂದರವಿಠಲ ||

Lyrics in English

Jaya janakikanta jaya sadhujana vinutajayatu ||
Mahimavanta jaya bagyavanta jaya jaya ||pa||

Dasarathana maga vira dashakanta samhara
Pasupatishvaramitra pavanacharitra
Kusuma bana svarupa kushalakirti kalapa
Asama saahasashiksha ambujadalaksha ||1||

Saamaganalola sadhujanaparipala
Kaamitarthavidaata kirtisanjata
Somasuryaprakasha sakala lokadhisha
Srimaharaguvira sindhugambira ||2||

Sakala shaastravichara sharana janamandara
Vikasitambujavadana vishvamayasadana
Sukruta mokshadhisha saaketapuravasa
Baktavatsala rama purandaraviththala ||3||


Leave a Reply