ಜಯಲಕ್ಷ್ಮಿ ಜನನಿ ಪಾಲಿಸೆ / Jayalakshmi Janani palise

ಜಯಲಕ್ಷ್ಮಿ ಜನನಿ ಪಾಲಿಸೆ
ಹರಿರಮಣಿ ಮಂಗಳೆ ಸಿರಿ ದೇವಿ ನಮಿಪೆ  ||ಜಯಲಕ್ಷ್ಮಿ||

ಇಂದಿರೆ ಹರಿ ಮಂದಿರೆ
ಚಂದಿರನ ಸಹೋದರಿಯೇ ||ಇಂದಿರೆ||
ಸುಂದರಿಯೆ ಸಿರಿದೇವೀ||2||
ನಿನ್ನಯ ಚರಣಕೆ ನಮಿಪೆ   ||ಜಯಲಕ್ಷ್ಮಿ||

ಕಮಲೆಯೆ ವಿಮಲೆಯೆ ದಯಾಮಯೆ
ಸುಮಕೋಮಲೆ ಕಮಲಾಲಯೆ  ||ಕಮಲೆಯೆ||
ಶ್ರಮದೂರೆ ಪೊರೆಯೆ ಕೋಮಲೆ||2||
ನಿನ್ನಯ ಚರಣಕೆ ನಮಿಪೆ    ||ಜಯಲಕ್ಷ್ಮಿ||

ಕ್ಷೀರಸಾಗರ ಕನ್ನಿಕೆ
ಮಾರಜನನಿ ಸಾರಸಾಂಬಕೆ||ಕ್ಷೀರ||
ಸಾರಸಾಕ್ಷಗೆ ಮಾಲೆಯನರ್ಪಿಸಿ||2||
ವರಿಸಿದವಳಿಗೆ ನಾ ನಮಿಪೆ   ||ಜಯಲಕ್ಷ್ಮಿ||

Lyrics in English

Jayalakshmi Janani palise
hariramani mangalye siri devi namipe || jayalakshmi ||

Indire Hari mandire
chandirana sahodariye ||
sundariye siridevi
ninnaya charanakke namipe || jayalakshmi ||

Kamaleye vimaleye dayamaye
sumakomale kamalalaye ||
shramadoore poreye komale
ninnaya charanakke namipe || jayalakshmi ||

Ksheerasagara kannike
marajanani sarasambake ||
sarasakshage maleyanarpisi |
varisidavalige naa namipe || jayalakshmi ||


Leave a Reply