ದೇವಿ ನಮ್ಮ ದ್ಯಾವರು ಬಂದವ್ರೆ / Devi namma dyavaru bandavre bannire

ದೇವಿ ನಮ್ಮ ದ್ಯಾವರು ಬಂದವ್ರೆ
ಬನ್ನೀರೆ ನೋಡ ಬನ್ನೀರೆ
ಬನ್ನೀರೆ ನೋಡ ಬನ್ನಿರೇ || 2 ||

ಕೆಂಗಣ್ಣ ಮೀನನಾಗಿ ನಮ್ಮ ರಂಗ
ಗುಂಗಾಡಿ ಸೋಮನ್ನ ಕೊಂದಾನ್ನ|
ಗುಂಗಾಡಿ ಸೋಮನ್ನ ಕೊಂದು ವೇದವ
ಬಂಗಾರದೊಡಲನಿಗಿತ್ತಾನ್ನ || ದೇವಿ ||

ದೊಡ್ಡ ಮಡುವಿನೊಳಗೆ ನಮ್ಮ ರಂಗ
ಗುಡ್ಡವ ಹೊತ್ತುಕೊಂಡು ನಿಂತಾನ್ನ|
ಗುಡ್ಡವ ಹೊತ್ತುಕೊಂಡು ನಿಂತು
ಸುರರನ್ನು ದೊಡ್ಡವರನ್ನಾಗಿ ಮಾಡ್ಯಾನ || ದೇವಿ ||

ಚೆನ್ನ ಕಾಡಿನ ಹಂದಿಯಾಗಿ ನಮ್ಮ ರಂಗ
ಚಿನ್ನದ ಕಣ್ಣನ ಕೊಂದಾನ್ನ |
ಚಿನ್ನದ ಕಣ್ಣನ ಕೊಂದು ಭೂಮಿಯ
ವನ್ನಜಸಂಭವಗಿತ್ತಾನ್ನ || ದೇವಿ ||

ಸಿಟ್ಟಿಲಿ ಸಿಂಹನಾಗಿ ನಮ್ಮರಂಗ
ಹೊಟ್ಟೆಯ ಕರುಳ ಬಗೆದಾನ್ನ |
ಹೊಟ್ಟೆಯ ಕರುಳ ಬಗೆದು ನಮ್ಮ ರಂಗ
ಪುಟ್ಟಗೆ ವರವ ಕೊಟ್ಟಾನ್ನ || ದೇವಿ ||

ಹುಡುಗ ಹಾರುವನಾಗಿ ನಮ್ಮ ರಂಗ
ಬೆಡಗಿನ ಮುಗಿಲಿಗೆ ಬೆಳೆದಾನ್ನ |
ಬೆಡಗಿನ ಮುಗಿಲಿಗೆ ಬೆಳೆದು ಬಲಿಯನ್ನು
ಅಡಿಯಿಂದ ಪಾತಾಳಕೊದ್ದಾನ್ನ || ದೇವಿ ||

ತಾಯ ಮಾತನು ಕೇಳಿ ಸಾಸಿರ ತೋಳಿನ
ಆವಿನ ಕಳ್ಳನ ಕೊಂದಾನ್ನ |
ಆವಿನ ಕಳ್ಳನ ಕೊಂದು
ನಮ್ಮ ರಂಗ ಅವನೀಸುರರಿಗಿತ್ತಾನ್ನ || ದೇವಿ ||

ಪಿಂಗಳ ಕಣ್ಣಿನ ಕೊಂಗಗಳ ಕೂಡಿ
ಛಂಗನೆ ಲಂಕೆಗೆ ಪೋದಾನ್ನ |
ಛಂಗನೆ ಲಂಕೆಗೆ ಪೋಗಿ ನಮ್ಮ ರಂಗ
ಹೆಂಗಸು ಕಳ್ಳನ ಕೊಂದಾನ್ನ || ದೇವಿ ||

ಕರಿಯ ಹೊಳೆಯಲಿ ತುರುಗಳ ಕಾಯುತ್ತಾ
ಉರಗನ ಮಡುವ ಧುಮುಕ್ಯಾನ್ನ |
ಉರಗನ ಹೆಡೆ ಮೇಲೆ ಹಾರಾರಿ ಕುಣಿವಾಗ
ಯಾರ್ಯಾರಿಗೇನೇನೋ ಕೊಟ್ಟಾನ್ನ || ದೇವಿ ||

ಭಂಡನಂದದಿ ಪುಂಡರಿಕಾ‌ಕ್ಷನು
ಕಂಡಕಂಡಲ್ಲಿ ತಿರುಗ್ಯಾನ |
ಕಂಡಕಂಡಲ್ಲಿ ತಿರುಗಿ ತ್ರಿಪುರರ
ಹೆಂಡಿರನ್ನೆಲ್ಲಾ ಕೆಡಿಸ್ಯಾನ || ದೇವಿ ||

ಚೆಲ್ವ ಹೆಂಡತಿಯ ಕುದುರೆಯ ಮಾಡಿ
ಒಳ್ಳೆಯ ರಾಹುತನಾದಾನ್ನ |
ಒಳ್ಳೆಯ ರಾಹುತನಾಗಿ ಲೇಂಛರ
ಡೊಳ್ಳು ಹೊಟ್ಟೆಯ ಮೇಲೆ ಒದ್ದಾನ್ನ || ದೇವಿ ||

ಡೊಳ್ಳಿನ ಮ್ಯಾಲ್ ಕೈಯ ಬರಮಪ್ಪ ಹಾಕ್ಯಾನ…
ತಾಳವ ಶಿವಪ್ಪ ತಟ್ಯಾನಾ |
ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನ
ಗೋವಿಂದ ಗೋವಿಂದ
ಗೋವಿಂದ ಗೋವಿಂದ |
ಒಳ್ಳೊಳ್ಳೆ ಪದಗಳ ಹನುಮಪ್ಪ ಹಾಡ್ಯಾನ
ಚೆಲುವ `ಕನಕಪ್ಪ’ ಕುಣಿದಾನ ||ದೇವಿ||

Lyrics in English

Devi namma dyavaru bandavre | bannire noda bannire | bannire noda bannire ||2 times||

kenganna meenanagi namma ranga | gungaadi somanna kondu | gungaadi somanna kondu vedava | bangaradodalanigittanna ||Devi||

Dodda maduvinolage namma ranga | guddava hottukondu ninttaanna | guddava hottukondu nintu | surarannu doddavarannaagi madyana ||devi ||

Chenna kadina handiyagi namma ranga chinnada kannana kondaanna chinnada kannana kondu bhuviya vannajasambhavagittaanna

Sittili simhanagi namma ranga | hotteya karula bagedanna | hotteya karula bagedu namma ranga | puttige varava kottaaanna ||Devi||

Huduga haaruvanaagi namma ranga | bedagina mugilige beledaanna | bedagina mugilige beledu baliyannu | adiyinda paatalakoddaanna ||Devi||

Taaya matanu keli sasira tolina | aavina kallana kondanna | aavina kallana kondu, namma ranga avanisurarigittaanna || Devi ||

Pingala kannina kongagala koodi | changane lankege podaanna | changane lankege pogi namma ranga | hengasu kallana kondaanna || Devi ||

Kariya holeyali turugala kaayutta | uragana maduva dhumukyaanna | uragana hede mele haarari kunivaaga | yaaryarigeneno kottaanna || Devi ||

Bhandanandadi pundarikaakshanu | kandakandalli tirugyaana | kandakandalli tirugi tripurara | hendiranella kedisyaana ||Devi ||

Chelva hendatiya kudureya maadi | olleya raahutanaadanna | olleya rahutanaagi lenchara | dollu hotteya mele oddaanna || Devi ||

Dollina myaale kaiya baramappa haakyaana …. taalava shivappa tatyaana | ollolle padagala hanumappa haadyaana govinda govinda govinda govinda | ollolle padagala hanumappa haadyaana cheluva ‘kanakappa’ kunidaana ||Devi||


Leave a Reply