
ನಂಬಿದೆ ನಿನ್ನ ಪಾದ ಗುರು ಮುಖ್ಯಪ್ರಾಣ |
ನಂಬಿದೆ ನಿನ್ನ ಪಾದ ಡಂಭವ ತೊಲಗಿಸಿ |
ಡಿಂಭದೊಳಗೆ ಹರಿಯ ಬಿಂಬ ಪೊಳೆ ವಂತೆ ಮಾಡೋ ||ನಂಬಿದೆ ||
ಅಂತರಂಗದ ಉಸುರ ಹೊರಗೆ ನೂಕಿ
ಅಂತರಂಗಕ್ಕೆ ಸೇರುವಾ ||ಅಂತರಂಗದ||
ಪಂತದಾಳು ನೀನೇ ಕಂತು ಜನಕನಲ್ಲಿ ||೨||
ಮಂತ್ರಿಯೆನಿಸಿ ಸರ್ವಾಂತರ್ಯಾಮಿಯಾಗಿ
ನಿಂತು ನಾನಾ ಬಗೆ ತಂತು ನಡೆಸುವ
ಹಂತಕಾರಿ ಗುಣವಂತ ಬಲಾಢ್ಯ ||ನಂಬಿದೆ||
ಇಪ್ಪತ್ತು ಒಂದು ಸಾವಿರ ಐದೊಂದು ನೂರು
ಅಪ್ರತಿಮ ಹಂಸ ಮಂತರಾ ||ಇಪ್ಪತ್ತು||
ತಪ್ಪದೆ ದಿನ ದಿನ ಒಪ್ಪದಿಂದಲಿ ಜಪಿಸಿ||೨||
ತಪ್ಪಿಸಿ ಭವದ ಸಮೀಪದ ಜೀವರಿಗೆ
ಅಪ್ಪನಂದದಿ ಪುಣ್ಯ ಬಪ್ಪಂತೆ ಕರುಣಿಸು
ಕಪ್ಪು ವರ್ಣನ ಕೂಡೊಪ್ಪಿಸಿ ಪಾಲಿಸು ||ನಂಬಿದೆ ||
ಹತ್ತೇಳು ಎರಡಾಯಿತು
ನಾಡಿಯೊಳು ಸುತ್ತಿ ಸುತ್ತುವ ಮಾರುತ ||
ಉತ್ತರ ಲಾಲಿಸೊ ಉತ್ಕ್ರಮಣದಲ್ಲಿ ||೨||
ನೆತ್ತಿಯ ದ್ವಾರದಿಂದ ಎತ್ತ ಪೋಗಳಿಸದೆ
ತಪ್ಪು ಮರುಳು ಜೀವೋತ್ತಮನೆ
ಸಮಚಿತ್ತ ಎನಗೆ ಕೊಡುತ್ತ ಉಧ್ಧರಿಸೋ ||ನಂಬಿದೆ||
ಪಂಚ ಪ್ರಾಣ ರೂಪನೆ ಸತ್ವ ಕಾಯ |
ಪಂಚೇಂದ್ರಿಯಗಳಪ್ಪನೆ | ಮುಂಚಿನ
ಪರಮೇಷ್ಠಿ ಸಂಸಚಿ ತಗಾಮ ಬಿಡಿಸಿ |
ಕೊಂಚ ಮಾಡೋ ಪ್ರಾರಬ್ಧ ವಂಚ ನೆ ಗೈಸದೇ |
ಅಂಚ ಅಂಚಿಗೆ ಪರಪಂಚಗೋಳೋಡಿಸಿ |
ಪಂಕ ವಕ್ತ್ರ ಹರಿ ಮಂಕಾದ ಗುರುವೆ || ||ನಂಬಿದೆ ||
ಯೋಗಾಸನದೊಳಿಪ್ಪಾ
ಯಂತ್ರೋದ್ಧಾರಕ ಭಾಗವತ ಜನರಪ್ಪ ||
ಯೋಗಿಗಳಿಗೆ ಈಶಾ ವ್ಯಾಸ
ಯೋಗಿಗೊಲಿದ ನ್ಯಾಸ||ಯೋಗಿ||
ಶ್ರೀತುಂಗಭದ್ರ ನಿವಾಸ
ಬಾಗುವೆ ಕೊಡು ಲೇಸಾ
ಶ್ರೀಗುರುವಿಜಯವಿಠ್ಠಲ ಪಾದಕೆ
ಬಾಗಿದ ಭವದೂರ ಜಾಗರ ಮೂರುತಿ ||ನಂಬಿದೆ ||
Lyrics in English
Nambide ninna paada guru mukhyapraana || pa ||
Nambide ninna paada dambhava tolagisi |
Dimbhadolage hariya bimba polevamte maado || a. Pa. ||
Antarangada usura horage bittu |
Antarangakke seruva |
Panthadaalu neene kantu janakanalli |
Mantriyenisi sarvaantaryaamiyaagi |
Nintu naanaa bage tamtu nadesuva |
Hantakaari gunavanta balaadhya || Nambide ||
Ippattu omdu saavira aidondunooru |
Apratima hamsa mantara |
Tappade dina dina oppuvandadi japisi |
Tappiso bhavava sameepada jeevake |
Appanandadi punya bappante karuniso |
Kappu varnana kooda oppisi paaliso || Nambide ||
Hattelu eradaayitu naadiyolu |
Sutti suttuva maaruta |
Uttara laaliso utkrumanadalli |
Nettiya dwaaradinda etta pogalisade |
Tattuvarolu jeevottamane |
Sama citta enage kodututtara laaliso || 2 ||
Pancha praana roopane satwa kaaya |
Panchendriyagalappane |
Munchina parameshthi sanchitagaama bidisi |
Koncha maado praarabdha vanchane gaisade |
Anchanchige parapanchagalodisi |
Pancha vaktra hari manchada guruve || 4 ||
Yogaasanadolippa yantroddhaara |
Bhaagavatarappa |
Yogigaligeesha vyaasayogigolida nyaasa |
Shreetumgabhadra nivaasa | baaguve kodu enage
Shreeguruvijayaviththalana paadake |
Baagida bhavadoora jaagara mooruti || 5 ||