
ನಡೆದು ಬಾಮ್ಮ ಲಕ್ಷ್ಮಿ ನಿನಗೆ ನಡೆಮುಡಿಯ ಹಾಸುವೆ
ನಡೆಮುಡಿಯ ಹಾಸಿ ನಾ ಚರಣ ಕಮಲಕ್ಕೆರಗುವೆ ॥ ಪ ||
ಮರುಗ ಮಲ್ಲಿಗೆ ಧವನ ಸಂಪಿಗೆ ಸರಗಳನ್ನೆ ಪೂಜಿಪೆ
ಸರಗಳನ್ನೇ ಪೂಜಿಸಿ ನಾ ವರಗಳನ್ನೇ ಬೇಡುವೆ || ೧ ||
ಹೀರೆ ಕುಂಬಳಕಾಯಿ ಪಡವಲ ಶಾಕ ಪಾಕವ ಮಾಡುವೆ
ಸಣ್ಣ ಶಾವಿಗೆ ಭಕ್ಷವು ನೈವೇದ್ಯವು ಪರಮಾನ್ನವು ॥ ೨ ॥
ಎಷ್ಟು ಬೇಡಿದರೂ ದಯೆ ಏಕೆ ಬರಲಿಲ್ಲ ಲಕ್ಷ್ಮಿ ನಿನಗೆ
ದಿಟ್ಟ ಪ್ರಸನ್ನ ವೆಂಕಟ ವಿಠ್ಠಲನ ಪಟ್ಟದ ರಾಣಿಯೆ ॥ ೩॥
Lyrics in English
Nadedu baamma Lakshmi ninagenu nademudiya hasuve
nademudiya hasi naa charana kamalakkeraguve ||pa||
Maruga mallige dhavana sampige saragalanne poojipe
saragalanne poojisi naa varagalanne beduve ||1||
Here kumbalakayi padavala shaaka paakava maduve
Sanna shavige naivedyavu paramannavu ||2||
Eshtu bedidaru daye eke baralilla Lakshmi ninage
ditta prasanna Venkata vittalana pattada ranige ||3||