ನಿನ್ನ ಮಗನ ಲೂಟಿ /Ninna magana looti

ನಿನ್ನ ಮಗನ ಲೂಟಿ ಘನವಮ್ಮ-ಕರೆದು |ಚಿಣ್ಣಗೆ ಬುದ್ಧಿಯ ಹೇಳೇ ಗೋಪಮ್ಮ || ಪ||

ಶಿಶುಗಳ ಕೈಲಿದ್ದ ಬೆಣ್ಣೆಗೆ ಉಳಿವಿಲ್ಲ |ಪಶು-ಕರುಗಳಿಗೆ ಮೀಸಲುಗಳಿಲ್ಲ ||ಮೊಸರ ಮಡಕೆಯಲಿ ಮಾರಿ ಹೊಕ್ಕಂತಾಯ್ತು |ಶಶಿ ಮುಖಿಯರು ಗೋಳಿಡುತಿಹರಮ್ಮ ||1||

ಮರೆತು ಮಲಗಿದ್ದವರ ಮೊಲೆಗಳ ತಾನುಂಬ |ಕಿರಿಯ ಮಕ್ಕಳಿಗೆ ಮೊಲೆಹಾಲಿಲ್ಲವೊ ||ಹೊರಗೆ ಲೂಟಿ ಒಳಗೆ ಈ ಲೂಟಿ |ಎಚ್ಚರದ ಬಟ್ಟೆಯ ಕಾಣೆವಮ್ಮ ಗೋಪಮ್ಮ ||2||

ಊರೊಳಗಿರಲೀಸ ಊರ ಬಿಟ್ಟು ಹೋಗಲೀಸ |ಈರೇಳು ಭುವನಕೆ ಒಡೆಯನಂತೆ ||ವಾರಿಜನಾಭ ಶ್ರೀ ಪುರಂದರವಿಠಲನ |ಕೇರಿಯ ಬಸವನ ಮಾಡಿ ಬಿಟ್ಟೆಯಮ್ಮ ||3||

Lyrics in English

Ninna magana looti ghanavamma||Karedu chinnage buddhiya pele gopemma ||pa||

Shishugala kailidda bennege ulivilla |pashu karugalige meesalugalilla | mosara madakeyali maari hokkantaaytu |shashi mukhiyaru golidutiharamma ||1||

Maretu malagiddavara molegala taanumba | kiriya makkalige mole haalillavo | horage looti olage e looti echharada batteya kaanevamma gopamma ||

Orolagiraleesa oora bittu hogalisa | erelu bhuvanake odeyanante |vaarijanaabha sri purandara vittalana| keriya basavana maadi bitteyamma ||3||


Leave a Reply