ಪಾಲಿಸೆ ವರ ಮಾಲೆಯ ಭ್ರಾಮರಿ / Palise Vara maaleya bhramari

ಪಾಲಿಸೆ ವರ ಮಾಲೆಯ ಭ್ರಾಮರಿ||2||
ಚರಣ ಪಲ್ಲವ ಕುಸುಮವ
ವರದ ಹಸ್ತದ ಪುಷ್ಪವಾ  ||ಚರಣ||
ಉಡಿಯ ಮಲ್ಲಿಗೆ ಕರದ ತಾವರೆ
ವರ ಪ್ರಸಾದದ ಮಾಲೆಯ   ||ಪಾಲಿಸೆ||

ಶರಣರನ್ನು ಪೊರೆಯಲೆಂದೆ
ಧರೆಗೆ ಬಂದು ನಿಂತೆಯ||ಶರಣರನ್ನು||
ಕಟೀಲ ರಾಣಿ ಕುಸುಮವೇಣಿ||2||
ನಿನ್ನ ಪಾದದ ಪಂಕಜಾ
ಗಂಧ ಘಮಘಮ ಹೂದಂಡೆಯಾ||ನಿನ್ನ ಪಾದದ||
ಮುಡಿಯ ಸಂಪಿಗೆ ಕರದ ಕೇದಗೆ
ವರ ಪ್ರಸಾದದ ಮಾಲೆಯ||ಪಾಲಿಸೆ||

ಬೇಡಿದವರಿಗೆ ನೀಡಲೆಂದೆ
ಭುವಿಗೆ ಓಡಿ ಬಂದೆಯಾ||ಬೇಡಿದವ||
ಕಟೀಲ ಅಂಬೆ ಸುಂದರಾಂಬೆ||2||
ಪರಮ ಚರಣದ ಪುಷ್ಪವ
ಗಂಧ ಸಂಭ್ರಮ ದಂಡೆಯ||ಪರಮ||
ಮುಡಿಯ ನೈದಿಲೆ ಕರದ ರಂಜೆ
ವರ ಪ್ರಸಾದದ ಮಾಲೆಯ||ಪಾಲಿಸೆ||

ಧರೆಯ ಭಾರವ ಇಳುಹಳೆಂದೆ
ದುಂಬಿ ರೂಪದಿ ಬಂದೆಯಾ||ಧರೆಯ||
ಕಟೀಲ ಕಣ್ಮಣಿ ಮಧುಮನೋನ್ಮಣಿ||2||
ನಿನ್ನ ಅಡಿಗಳ ಹೂಗಳ
ಘನ್ನ ಮಹಿಮನ ಪ್ರಸಾದವ||ನಿನ್ನ ||
ಮುಡಿಯ ಸೇವಂತಿ ಕರದ ನಂದಿನಿ
ವರ ಪ್ರಸಾದದ ಮಾಲೆಯ  ||ಪಾಲಿಸೆ||

Lyrics in English

Palise Vara maaleya bhramari |
charana pallava kusumava
varada hastada pushpava || 
udiya mallige karada tavare
Vara Prasadada maleya ||

Sharanarannu poreyalende
dharege bandu ninteya |
kateela Rani kusumaveni ||
ninna padada pankaja
gandha ghama ghama hoodandeya |
mudiya sampige karada kedage
Vara Prasadada maleya||

Bedidavarige needalende
bhuvige odi bandeya |
kateela ambe sundarambe ||
parama charanada pushpava
gandha sambhrama dandeya |
mudiya naidile karada ranje
Vara Prasadada maleya||

Dhareya bharava iluhalende
dumbi roopadi banndeya |
kateela kanmani madhumanonmani |
ninna adigala hoogala
ghanna mahimana prasadava ||
mudiya sevanti karada nandini
Vara Prasadada maleya||

Leave a Reply