
ಬಂದಾ ಮನಮಾನಸಕೆ ಶ್ರೀ ಹರಿ |
ಇಂದಿರೆ ರಮಣ ಮುಕುಂದ ಆನಂದದಿ||
ತಳತಳಿಸುವ ನವರತ್ನಕಿರೀಟವು |
ಹೊಳೆವ ಮಕರ ಕುಂಡಲ ಧ್ವಜವು |
ತುಳಸಿಮಾಲೆ ವನಮಾಲೆಯಿಂದೊಪ್ಪುತ |
ಬಲು ತೇಜಸ್ವಿಗೆ ತೇಜೋಮಯನಾದ ||ಹರಿ ಬಂದ||
ಲಲನೆ ರುಕ್ಮಿಣಿ ಸತ್ಯಭಾಮೆರಿಂದೊಡಗೂಡಿ |
ನಲಿದಾಡುತ ಎನ್ನ ಹ್ರದಯದಲಿ ||
ಬಲುಬಲುವಿಗಳ ಅಜ್ಞಾನಾಂಧಕಾರದ |
ಕುಲವ ನೋಡಿಸಿ ಕುಲದೈವ ಮೂರುತಿ ||ಬಂದಾ ||
ಎಷ್ಟು ಜನ್ಮದ ಪುಣ್ಯ ಬಂದೊದಗಿತೊ |
ಎಷ್ಟು ಧನ್ಯರೊ ನಮ್ಮ ಹಿರಿಯರು ||
ಎಷ್ಟು ದೇವತೆಗಳು ನಮಗೆ ಹರಸಿದರೊ |
ದೃಷ್ಟಿ ಗೋಚರ ನಮ್ಮ ವ್ಯಾಸವಿಠ್ಠಲ ಬಲ್ಲ ||ಬಂದಾ||
Lyrics in English
Banda manamanasake sri hari | indire Ramana mukunda anandadi ||
Talatalisuva navaratna kireetavu | holeva makara kundala dhwajavu | tulasimale vanamaleyindopputa | Balu tejasvige tejomayanada || hari Banda ||
Lalane rukmini satyabhamerindodagoodi | nalidaduta enna hrudayadali | balubaluvigala ajnanandhakarada | kaulava nodisi kuladaiva mooruti || Banda ||
Eshtu janmada punya bandodagito | eshtu dhanyaro namma hiriyaru | eshtu devategalu namage harasidaro | drushti gochara namma vyasavittala balla || Banda ||