ಬಂದು ನೋಡಿರೋ ಶ್ರೀ ಸುಬ್ರಹ್ಮಣ್ಯನ / Bandu nodiro sri subrahmanyana

ಬಂದು ನೋಡಿರೋ ಶ್ರೀ ಸುಬ್ರಹ್ಮಣ್ಯನ
ನಂಬಿದವರ ಪೊರೆವನ ಸುರಾಗ್ರ ಗಣ್ಯನ ||ಬಂದು||

ಶೂರಪದ್ಮ ತಾರಕಾಸುರ ಮಥನ ನಿಪುಣನ
ಸಾರ ಧಾರಾ ತೀರ್ಥ ತಟ ವಿಹಾರ ನಿರತನ |
ನೀರಜಾಸನ ಮಾರ ವೈರಿ ಶೌರಿ ಜಾತನ |
ನರಸಿಂಹನ ಧ್ಯಾನಿಸುತಲಿ ಮುದದಲಿರ್ಪನ ||ಬಂದು||

ಅನ್ನದಾತ ಭಾಗ್ಯಧಾತನೆಂದು ಖ್ಯಾತನ
ಅನ್ಯ ವಾರ್ತೆಗೆರಗದಂತೆ ಮನವ ಮಾಳ್ಪನ |
ಉನ್ನತದ ಕುಕ್ಕೆ ಪುರದಿ ಮುದದಿ ನಿಂತನ
ಘನ್ನ ಮಹಿಮ ವಾಸುಕೀ ಪ್ರಿಯ ಶೇಷ ಸಹಿತನ ||ಬಂದು||

ವಿಭುವಿಗೊಲಿದ ವಿಭುದ ವಂದ್ಯ ಮದನ ರೂಪನ
ಶುಭವ ಜನಕೆ ಕರೆದು ಕೊಡುವುದಾರ ಚರಿತನ |
ವಿಭವದನನ ಕೂಡೆ ನಿತ್ಯ ಪೂಜೆಗೊಂಬನ
ಅಭಯ ವರದನಾದ ನಮ್ಮ ಸ್ಕಂದನ ವಂದ್ಯನ ||ಬಂದು||

Lyrics in English

Bandu nodiro sri subrahmanyana
nambidavara porevana suragra ganyana || bandu ||


Shoorapadma tarakasura mathana nipunana
saradhara teertha tatavihara niratana |
neerajasana mara vairi shourijatana
narasimhana dhyanisutali mudadalirpana || bandu ||


Annadata bhagyadatanendu khyatana
anyavartegeragadante manava maloana |
unnatada kukke puradi mudadi nintana
ghanna mahima vasuki priya shesha sahitana || bandu ||


Vibhuvigolida vibhuda vandya madana roopana
shubhava janake karedu koduvudaracharitana |
vibhavadanana kode nityapoojegombana
abhaya varadanada namma skandana vandyana || bandu ||


Leave a Reply