
ಮನವ ಶೋಧಿಸಬೇಕು ನಿತ್ಯಾ
ದಿನ ದಿನ ಮಾಡುವ ಪಾಪ ಪುಣ್ಯದ ವೆಚ್ಚ ||ಮನವ||
ಧರ್ಮ ಅಧರ್ಮ ವಿಂಗಡಿಸಿ
ಅಧರ್ಮದ ನರಗಳ ಬೇರ ಕತ್ತರಿಸಿ ನಿರ್ಮಲಾಚಾರದಿ ಚರಿಸಿ ||2||
ಪರಬೊಮ್ಮ ಮೂರುತಿ ಪಾದಕಮಲವ ಭಜಿಸಿ ||ಮನವ||
ತನುವ ಖಂಡಿಸಿ ಒಮ್ಮೆ ಮಾಣೋ
ನಿನ್ನಮನವ ದಂಡಿಸಿ
ಪರಮಾತ್ಮನ್ನ ಕಾಣೋ||ತನುವ||
ಕೊನೆಗೆ ನಿನ್ನೊಳಗೆ ನೀ ಜಾಣೋ ||2||
ಮುಕ್ತಿ ನಿನಗೆ ದೂರಿಲ್ಲವು ಒಂದೇ ಗೇಣೊ ||ಮನವ||
ಆತನವರಿಗೆ ಕೇಡಿಲ್ಲ ,ಅವ ಪಾತಕ
ಪತಿತ ಸಂಗವ ಮಾಡುವನಲ್ಲ
||ಆತನವರಿಗೆ||
ನೀತಿವಂತರು ಕೇಳಿರೆಲ್ಲ ||2||
ನಮಗಾತನೆ ಗತಿ ಈವ ಪುರಂದರವಿಠಲ ||ಮನವ||
Lyrics in English
Manava shodhisa beko nitya dina dina mAduva papa punyadda veccha
Dharma adharma vingadisi adharmada naragala bega kattarisi
nirmalacharadi sarisi para bomma muruti pada kamalava bhajisi ||
Tanuva khandisi omme mano ninna manava dandisi paramatmanna kano
konege ninnolage ni jano mukti nina durillavu onde geno|| ||
Atanarivage kedilla ava padaka pati sangava madavanalla
nitivantaru kelirella nama kadena gatiyiva purandara vittala||